ಆ.31: ಕೋಲ್ಚಾರಿನಲ್ಲಿ 26 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ- ಬೆಳ್ಳಿ ಹಬ್ಬದ ಸಂಭ್ರಮ, ಅಭಿನಂದನಾ ಕಾರ್ಯಕ್ರಮ

0

ಕೋಲ್ಚಾರು ಶ್ರೀ ಶಾರದಾಂಬ ಭಜನಾ ಮಂದಿರ ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ 26 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ಬೆಳ್ಳಿ ಹಬ್ಬದ ಆಚರಣೆ ಹಾಗೂ ಸಾಧಕರನ್ನು ಅಭಿನಂದಿಸುವ ಸಮಾರಂಭವು ಆ.31 ರಂದು
ಕೋಲ್ಚಾರು ಶಾರದಾಂಬ ಭಜನಾ ಮಂದಿರದಲ್ಲಿ ನಡೆಯಲಿರುವುದು. ಬೆಳಗ್ಗೆ ವೇದವ್ಯಾಸ ತಂತ್ರಿಯವರಿಂದ ಗಣಪತಿ ವಿಗ್ರಹದ ಪ್ರತಿಷ್ಠೆ ಮತ್ತು ಗಣಪತಿ ಹವನ ನೆರವೇರಲಿದೆ. ಬಳಿಕ ಸ್ಥಳೀಯ ಭಜಕರಿಂದ ಭಜನಾ ಕಾರ್ಯಕ್ರಮ, ನಂತರ ಧಾರ್ಮಿಕ ಸಭೆ ಮತ್ತು ಅಭಿನಂದನಾ ಸಮಾರಂಭ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕೊಯಿಂಗಾಜೆ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಎ.ಒ.ಎಲ್.ಇ.ಪ್ರಧಾನ ಕಾರ್ಯದರ್ಶಿ ,ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ.
ರೇಣುಕಾಪ್ರಸಾದ್ ದೀಪ ಪ್ರಜ್ವಲಿಸಲಿದ್ದಾರೆ.ಧಾರ್ಮಿಕ ಚಿಂತಕ, ಸಂಸ್ಕೃತ ವಿದ್ವಾಂಸರು ಡಾ.ವಿನಾಯಕ ಭಟ್ ಧಾರ್ಮಿಕ ಉಪನ್ಯಾಸ ನೀಡಲಿರುವರು.ಮುಖ್ಯ ಅಭ್ಯಾಗತರಾಗಿ ಶಾರದಾಂಬ ಭಜನಾ ಮಂದಿರ ದ ಮಾಜಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಆಲೆಟ್ಟಿ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಭಜನಾ ಮಂದಿರ ದ ಅಧ್ಯಕ್ಷ ಯತಿರಾಜ ಕೊಯಿಂಗಾಜೆ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ನಾಟಿ ವೈದ್ಯೆ ಮೀನಾಕ್ಷಿ ಕೋಲ್ಚಾರು, ಯಕ್ಷಗಾನ ಕಲಾವಿದ ಕೊರಗಪ್ಪ ಮಾಸ್ತರ್ ಕಣಕ್ಕೂರು, ‌ನಾಟಿ ವೈದ್ಯ ಸೋಮನಾಥ ನಾಯ್ಕ್ ಕಣಕ್ಕೂರು, ‌ಯಶವಂತ ನಾಯಕ್ ಕುಂಭಕ್ಕೋಡು, ಕಾರ್ಮಿಕ ಸೇವೆ ವಿಭಾಗದಲ್ಲಿ ಹುಕ್ರಪ್ಪ ಗೌಡ ಕೊನ್ನೋಡಿ ಹಾಗೂ ಕಾಲೇಜು ಮತ್ತು ಪ್ರೌಢ ಶಿಕ್ಷಣ ವಿಭಾಗದಲ್ಲಿ ‌ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯ ಜಿಲ್ಲಾ ಮಟ್ಟದ ಸಾಧಕರನ್ನು ಅಭಿನಂದಿಸಲಾಗುವುದು.ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.
ಅಪರಾಹ್ನ ಸ್ಥಳೀಯ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ‌ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.ಕೋಲ್ಚಾರು ಸ.ಉ.ಹಿ.ಪ್ರಾ.ಶಾಲೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿನ ವಿದ್ಯಾರ್ಥಿ ಗಳಿಂದ ಮತ್ತು ‌ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿರುವುದು. ಸಂಜೆ ಗಂಟೆ 6.00 ರಿಂದ ‌ಶ್ರೀ ಗಣೇಶನ ವೈಭವದ ಶೋಭಾಯಾತ್ರೆಯು ಭಜನಾ ಮಂದಿರ ದಿಂದ ಹೊರಟು ಕಣಕ್ಕೂರು ವರೆಗೆ ಸಾಗಿ ಬಂದು ತ್ರಿವೇಣಿ ಸಂಗಮದಲ್ಲಿ ಜಲಸ್ಥಂಭನವಾಗಲಿರುವುದು ಎಂದು ಸಮಿತಿ ಅಧ್ಯಕ್ಷ ಸತೀಶ್ ಕೊಯಿಂಗಾಜೆ ಯವರು ತಿಳಿಸಿರುತ್ತಾರೆ.