ಆ.31: ಜಾಲ್ಸೂರಿನಲ್ಲಿ 35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0


ಜಾಲ್ಸೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಸಭಾಭವನದಲ್ಲಿ ಆ.31ರಂದು ಜರುಗಲಿದೆ.
ಬೆಳಿಗ್ಗೆ 6ರಿಂದ ಸಾಮೂಹಿಕ ಪ್ರಾರ್ಥನೆ, ಧ್ವಜಾರೋಹಣ, ಹನ್ನೆರಡು ತೆಂಗಿನಕಾಯಿ ಗಣಪತಿ ಹವನ, ಗಣೇಶ ವಿಗ್ರಹ ಪ್ರತಿಷ್ಠೆ, ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.
ಬಳಿಕ ಕ್ಷೇತ್ರ ಪಾಲಕ ನಾಗಸಾನಿಧ್ಯದಲ್ಲಿ ನಾಗತಂಬಿಲ, ಬೆಳಿಗ್ಗೆ 9ರಿಂದ ಮಹಿಳೆಯರಿಗೆ ಹಣತೆ ಉರಿಸುವ ಸ್ಪರ್ಧೆ, ಭಜನಾ ಸಂಕೀರ್ತನೆ ನಡೆಯಲಿದೆ. ಮಧ್ಯಾಹ್ನ 12ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದ್ದು, ಅಪರಾಹ್ನ 2ರಿಂದ ವಿಘ್ನ ನಿವಾರಕನ ವೈಭವದ ಶೋಭಾಯಾತ್ರೆಯು ಜಾಲ್ಸೂರಿನಿಂದ ಹೊರಟು, ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಲ್ಸೂರು – ಅಡ್ಕಾರು – ವಿನೋಬನಗರದವರೆಗೆ ಸಂಚರಿಸಿ, ಕೋನಡ್ಕಪದವು ಮೂಲಕ ಸಾಗಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಬಳಿಯಲ್ಲಿ ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳ್ಳಲಿದೆ.