ದೇಶಭಕ್ತಿ ಗೀತಾ ಗಾಯನ ಸ್ಪರ್ಧೆಯಲ್ಲಿ ರೋಟರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

0

ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ಸುಳ್ಯ ಮತ್ತು ರೋಟರಿ ವಿದ್ಯಾಸಂಸ್ಥೆಗಳು ಸುಳ್ಯ ಇದರ ಸಹಯೋಗದಲ್ಲಿ ನಡೆದ ದೇಶ ಭಕ್ತಿ ಗೀತಾ ಗಾಯನ ಸ್ಪರ್ಧೆ ಯಲ್ಲಿ ರೋಟರಿ ಪ್ರೌಢಶಾಲೆಯ ಗೈಡ್ ವಿಭಾಗದ ವಿದ್ಯಾರ್ಥಿನಿರಾದ ವೈಷ್ಣವಿ ಶೆಟ್ಟಿ, ಸನಿಹ ಶಟ್ಟಿ, ಪ್ರಣಮ್ಯ. ಎನ್, ಶಮಿತಾ ಎಸ್, ಅನನ್ಯ. ಕೆ.ಬಿ, ಸಾನಿಕಾ ರೈ.ಮನಸ್ವಿ ಯು. ಬಿ. ಅನುಜ್ಞಾ ಎನ್. ಹೆಚ್ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.  ಸ್ಕೌಟ್ಸ್ ವಿಭಾಗದಲ್ಲಿ ಅದ್ವೈತ್, ಕಿಶನ್ , ಕೌಶಿಕ್ ಪ್ರಭು, ಸಮರ್ಥ್, ಶೃಂಗಿ ಪಿ. ವಿ , ಕುಶಾಲ್ ಕುಮಾರ್, ತನುಷ್ ಕೆ. ಆರ್,ಅಖಿಲ್ . ಕೆ. ವಿ. ದ್ವಿತೀಯ ಸ್ಥಾನ ಗಳಿಸಿದ್ದಾರೆ.


ಕಬ್- ಬುಲ್ ಬುಲ್ ವಿಭಾಗದಲ್ಲಿ ಕಬ್ ವಿದ್ಯಾರ್ಥಿ ಈಶಾನ. ಕೆ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ ಬುಲ್ ಬುಲ್ ವಿದ್ಯಾರ್ಥಿನಿ ಪೂರ್ವಿಕಾ ಆರ್. ಕೆ. ದ್ವಿತೀಯ ಸ್ಥಾನ ಗಳಿಸಿರುತ್ತಾರೆ.

ಗೈಡ್ ಕ್ಯಾಪ್ಟನ್ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಹಾಗೂ ಸ್ಕೌಟ್ ಮಾಸ್ಟರ್ ಶ್ರೀಹರಿ ಪೈಂದೋಡಿ ಯವರು ತರಬೇತಿ ನೀಡಿದ್ದರು .