ತಾಲೂಕಿನಲ್ಲಿ ಗೋಶಾಲೆ ನಿರ್ಮಾಣಕ್ಕೆ ಜಮೀನು ಮಂಜೂರಾತಿಗಾಗಿ ಸಚಿವರಿಗೆ ಮನವಿ

0

 

ಜಾಗ ಮಂಜೂರುಗೊಳಿಸಲು ಸಚಿವರಿಂದ ಡಿಸಿ, ತಹಶೀಲ್ದಾರ್ ರಿಗೆ ಸೂಚನೆ

 

ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ವತಿಯಿಂದ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಜಮೀನು ಮಂಜೂರಾತಿಗೆ ಸಚಿವ ಎಸ್.ಅಂಗಾರರಿಗೆ ಆ.27 ರಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಸೋಮಶೇಖರ ಪೈಕ, ಹಿಂದೂ ಜಾಗರಣಾ ವೇದಿಕೆಯ ಉಪಾಧ್ಯಕ್ಷ ಪ್ರಶಾಂತ ಕಾಯರ್ತೋಡಿ ಮತ್ತು ಗೋ ಶಾಲಾ ನಿರ್ವಹಣಾ ಸಂಯೋಜಕರಾದ ಜಿ ಜಗನ್ನಾಥ ಜಯನಗರ ಸುಳ್ಯ ಉಪಸ್ಥಿತರಿದ್ದರು.

 

ಸಚಿವರಿಂದ ಸೂಚನೆ : ಅಜ್ಜಾವರ ಗ್ರಾಮದಲ್ಲಿ ಗೋಮಾಳಕ್ಕೆ ಕಾದಿರಿಸಿದ ಜಮೀನನ್ನು ಗೋಶಾಲೆ ನಿರ್ಮಾಣ ಕ್ಕೆ ಜಮೀನು ಮಂಜೂರುಗೊಳಿಸಲು ಕ್ರಮ ಜರುಗಿಸಲು ಸಚಿವರು ಸೂಚಿಸಿದ್ದಾರೆ ಹಾಗೂ ಕೈಗೊಂಡ ವರದಿಯನ್ನು ಕಚೇರಿಗೆ ತಲುಪಿಸಬೇಕೆಂದು ಸಚಿವ ಅಂಗಾರರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ರಿಗೆ ಬರೆದ ಸೂಚನಾ ಪತ್ರದಲ್ಲಿ ತಿಳಿಸಿರುವುದಾಗಿ ತಿಳಿದು ಬಂದಿದೆ.