ಡಿಸೈನ್‌ ಚಾಲೆಂಜ್‌ -ಕೆ ವಿ ಜಿ ಇಂಜಿನಿಯರಿಂಗ್‌ ಕಾಲೇಜಿನ ವಾಯುಜಿತ್‌ ರೇಸಿಂಗ್‌ ಟೀಮ್‌ ಗೆ ಚಾಂಪಿಯನ್‌ಷಿಪ್‌ ರೂ. 65 ಸಾವಿರ ನಗದು ಬಹುಮಾನ

0

 

 

ಆ. 22 ರಿಂದ 26 ವರೆಗೆ ಬೆಂಗಳೂರಿನಲ್ಲಿ ನದೆದ INDIAN SOCIETY OF NEW ERA ENGINEERS-ISNEE MOTOR SPORT PRIVATE LIMITED ರವರು ಆಯೋಜಿಸಿದ GO-KART DESIGN CHALLENGE(GKDC) ಸ್ಪಧೆಯಲ್ಲಿ ಕೆ.ವಿ.ಜಿ ಇಂಜಿನಿಯರಿಂಗ್‌ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದಿಂದ ನಡೆಸಲ್ಪದುವ ಮೇಕರ್ಸ ಲ್ಯಾಬ್‌ ನ ವಿಧ್ಯಾಥಿ೯ಗಳು ತಯಾರಿಸಿದ ವಾಯುಜಿತ 4.0(VR-4.0)GO-KART ನ್ಯಾಷನಲ್‌ ಲೆವೆಲ್ ನಲ್ಲಿ ಅತ್ಯುತ್ತಮ ವಾಹನವಾಗಿ ಒವರಾಲ್‌ ಚಾಂಪಿಯನ್‌ಷಿಪ್‌ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ವೈಯಕ್ತಿಕ ವಿಭಾಗಗಳಾದ ENDURANCE TEST ಮತ್ತು DISCIPLINED TEAM ವಿಭಾಗದಲ್ಲಿ ಕೊಡ ಟ್ರೋಫಿ ಗಳಿಸಿದೆ. ಜೊತೆಗೆ 65,00೦ರೂಗಳ ನಗದು ಬಹುಮಾನವನ್ನು ಸ್ವೀಕರಿಸಿದೆ.

ಮೆಕ್ಯಾನಿಕಲ್‌ ವಿಭಾಗದ ಆಶ್ರಯದಲ್ಲಿ ಕಾಯಾ೯ಚಾರಿಸುತ್ತಿರುವ ‘ಮೇಕರ್ಸ ಲ್ಯಾಬ್’ ಅಸೋಸಿಯೇಷನ್‌ ನ ವಿದ್ಯಾಥಿ೯ಗಳು ಮೇಕರ್ಸ್ ಲ್ಯಾಬ್‌ ನಲ್ಲಿ ತಯಾರಿಸಿದ ಈ ವಾಹನವು ISNEE MOTORSPORTS ರವರು ತಯಾರಿಸಿದ ರೂಪುರೇಷೆಗಳನ್ನು ಅಳವಡಿಸಿದ್ದು, ಚಾಂಪಿಯನ್‌ಷಿಪ್‌ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಮೆಕ್ಯಾನಿಕಲ್‌ ವಿಭಾಗದ ಲಿಖಿತ್‌ ಕೆ.ಸಿ ಯವರು ಟೀಮ್‌ ಲೀಡರ್‌ ಆಗಿದ್ದು, 25 ಮಂದಿಯ ತಂಡವಾಗಿದೆ. ತಂಡದ ರೇಸಿಂಗ್‌ ಡೈರೆಕ್ಟರ್‌ ಆಗಿ ಮೆಕ್ಯಾನಿಕಲ್‌ ವಿಭಾಗದ ಮುಖ್ಯಸ್ಥ ಮತ್ತು ಕಾಲೇಜಿನ ಅಕಾಡೆಮಿಕ್‌ ಡೀನ್‌ ಆಗಿರುವ ಡಾ. ಉಮಾಶಂಕರ್‌ ಕೆ ಎಸ್‌ ಕಾಯ೯ನಿವ೯ಹಿಸುತ್ತಿದ್ದು, ಮೆಕ್ಯಾನಿಕಲ್‌ ವಿಭಾಗದ ಸಹಪ್ರಾಧ್ಯಾಪಕರಾದ ಪ್ರೊಫೆಸರ್‌ ಭರತ್‌ ಪಿಯವರು ಮೆಂಟರ್‌ ಆಗಿರುತ್ತಾರೆ. ತಂಡದ ಸಾಧನೆಯನ್ನು ಎ.ಒ.ಎಲ್‌.ಇ ಯ ಪ್ರಧಾನ ಕಾಯ೯ದಶಿ೯ಗಳಾದ ಡಾ. ರೇಣುಕಾಪ್ರಸಾದ್‌ ಕೆ.ವಿಯವರು ಶ್ಲಾಘಿಸಿದ್ದು ,ಕಾಲೇಜಿನ ಕಾಯ೯ನಿವ೯ಹಣಾಧಿಕಾರಿ ಡಾ. ಉಜ್ವಲ್‌ ಯು.ಜೆ, ಕಾಲೇಜಿನ ಪ್ರಾಂಶುಪಾಲ ಡಾ ಸುರೇಶ ವಿ, ವಿ.ಟಿ.ಯು ವಿಶೇಷಾಧಿಕಾರಿ ಡಾ. ಶಿವಕುಮಾರ್‌ ಹೆಚ್‌.ಆರ್‌, ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಶ್ರೀಧರ್‌ ಕೆ ರವರು ಪ್ರೋತ್ಸಾಹಿಸಿದ್ಧಾರೆ.