ಆ.31: ರೆಂಜಾಳ ದೇವಾಲಯದಲ್ಲಿ ಚೌತಿ ಉತ್ಸವ

0

 

 

ಮರ್ಕಂಜ ಹಾಗೂ ನೆಲ್ಲೂರುಕೆಮ್ರಾಜೆ ಗ್ರಾಮಗಳಿಗೊಳಪಟ್ಟ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ದೇವಾಲಯದಲ್ಲಿ ಚೌತಿ ಉತ್ಸವವು ಆ.31 ರಂದು ನಡೆಯಲಿದೆ.
ಬೆಳಿಗ್ಗೆ 7ಕ್ಕೆ ಉಷಾಃಪೂಜೆ, 7.30 ರಿಂದ ಅಂಗಡಿಮಜಲು ಅಯ್ಯಪ್ಪ ಭಜನಾ ಮಂಡಳಿ ಮತ್ತು ಕೊರತ್ತೋಡಿ ಶ್ರೀ ಚಾಮುಂಡೇಶ್ವರೀ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆದ ಬಳಿಕ ಬೆಳಿಗ್ಗೆ 9 ರಿಂದ 12 ತೆಂಗಿನಕಾಯಿ ಗಣಪತಿ ಹವನ ನಡೆಯಲಿದ್ದು, 10.30 ಕ್ಕೆ ಅಕ್ಷರಾಭ್ಯಾಸ ನಡೆಯಲಿದೆ.
ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6 ರಿಂದ 8 ರವರೆಗೆ ಚೌತಿ ಪ್ರಯುಕ್ತ ವಿಶೇಷ ಭಜನಾ ಸೇವೆ ಹಾಗೂ ಕೊಟ್ರಡ್ಕ ಶ್ರೀಮತಿ ಚೋಮಕ್ಕ ಮತ್ತು ಮಕ್ಕಳ ವತಿಯಿಂದ ವಿಶೇಷ ಪೂಜೆ ನಡೆಯಲಿದೆ. ರಾತ್ರಿ 8.30 ಕ್ಕೆ ಸಾಮೂಹಿಕ ಕಾರ್ತಿಕ ಪೂಜೆ ನಡೆದು ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.