ಪ್ರಾಕೃತಿಕ ವಿಕೋಪದಿಂದ ಸಂಪೂರ್ಣವಾಗಿ ಮನೆ ಕಳೆದುಕೊಂಡ ತಾಲೂಕಿನ ಏಳು ಕುಟುಂಬಕ್ಕೆ ಸರಕಾರದಿಂದ ಪರಿಹಾರಧನ ವಿತರಣೆ

0

 

ಸಚಿವ ಎಸ್. ಅಂಗಾರರಿಂದ ಪರಿಹಾರಧನದ ಚೆಕ್ ಹಸ್ತಾಂತರ

ಸುಳ್ಯ ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಮನೆ ಕಳೆದುಕೊಂಡ ಏಳು ಕುಟುಂಬಗಳಿಗೆ ಪ್ರಾಕೃತಿಕ ವಿಕೋಪ ಯೋಜನೆಯಡಿ ಹೊಸ ಮನೆ ನಿರ್ಮಾಣ ಮಾಡಲು ಸರಕಾರದಿಂದ ಒದಗಿಸಲಾಗುವ ರೂ.5 ಲಕ್ಷ ಮೊತ್ತದ ಪರಿಹಾರಧನದ ಮೊದಲ ಹಂತದ ರೂ.95,100 ಮೊತ್ತದ ಚೆಕ್ ನ್ನು 7 ಜನ ಫಲಾನುಭವಿಗಳಿಗೆ ಮೀನುಗಾರಿಕಾ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರು ವಿತರಿಸಿದರು.

ಸುಳ್ಯ ತಾಲೂಕಿನ ಕೊಲ್ಲಮೊಗ್ರ ಗ್ರಾಮದ ಚಾಲೆಪ್ಪಾಡಿ ಪಾರ್ವತಿ, ಲಲಿತ ಡಿ. ಕೊಲ್ಲಮೊಗ್ರ, ಲಿಂಗಪ್ಪ ಕೊಲ್ಲಮೊಗ್ರ, ಅಮರಮುಡ್ನೂರು ಗ್ರಾಮದ ಚೋಮ, ನಾಲ್ಕೂರು ಗ್ರಾಮದ ದಿವ್ಯ, ಹರೀಶ್ ನಾಲ್ಕೂರು ಹಾಗೂ ಕಲ್ಮಡ್ಕ ಗ್ರಾಮದ ರಾಘವ ಅವರುಗಳಿಗೆ ಸರಕಾರದಿಂದ ದೊರೆಯುವ ಐದು ಲಕ್ಷ ರೂ.ಗಳ ಪೈಕಿ ಮೊದಲ ಕಂತಿನ ರೂ. 95,100 ಚೆಕ್ಕನ್ನು ಸಚಿವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ್ ಕು. ಅನಿತಾಲಕ್ಷ್ಮಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿವರ್ಗದವರು ಉಪಸ್ಥಿತರಿದ್ದರು.