ಆ. 31  : ನಾರ್ಣಕಜೆಯಲ್ಲಿ ಗಣೇಶೋತ್ಸವ

0


ನೆಲ್ಲೂರು ಕೆಮ್ರಾಜೆ ಯುವಕ ಮಂಡಲ ನಾರ್ಣಕಜೆ ಇದರ ಆಶ್ರಯದಲ್ಲಿ 43 ನೇ ವರ್ಷದ ಶ್ರೀ ಗಣೇಶೋತ್ಸವವು ಆ. 31 ರಂದು ನಾರ್ಣಕಜೆ ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಲಿದೆ.
ಬೆಳಿಗ್ಗೆ 6.3೦ರಿಂದ ಗಣಪತಿ ಹವನ, ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ. ಬಳಿಕ ಭಜನಾ ಕಾರ್ಯಕ್ರಮ ನಡೆಯಲಿದ್ದು, ಪೂರ್ವಾಹ್ನ 1೦ರಿಂದ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 12.3೦ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಬಂಗಾರದ ಕಲಾವಿದೆರ್ ಪುರುಷರಕಟ್ಟೆ ಅಭಿನಯಿಸುವ ತುಳು ಹಾಸ್ಯಮಯ ನಾಟಕ ನಾಡ್ಂಡಲಾ ತಿಕ್ಕಂದ್ ಪ್ರದರ್ಶನಗೊಳ್ಳಲಿದ್ದು, ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಪಿರಮಿಡ್ಡ್ ಮೊಸರು ಕುಡಿಕೆ ನಡೆಯಲಿದ್ದು, ನಂತರ ಶೋಭಾಯಾತ್ರೆ ನಡೆಯಲಿದೆ.