ಆ.31ರಿಂದ.ಸೆ.2ತನಕ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

 

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-2022 ಇದರ ವತಿಯಿಂದ ಜರಗುವ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.31ರಿಂದ ಸೆ.2ತನಕ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ಜರುಗಲಿದೆ.

 

ಆ ಪ್ರಯುಕ್ತ ಚಿತ್ರಕಲಾ ಸ್ಪರ್ಧೆಯು ಆ.28 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಸಭಾ ಭವನದಲ್ಲಿ ನಡೆಯಿತು. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಉದ್ಘಾಟಿಸಿ ಮಾತನಾಡಿ ಚಿತ್ರಕಲಾ ಸ್ಪರ್ಧೆಯಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಅನಾವರಣವಾಗುವುದು ಮತ್ತು ಪ್ರತಿಭೆಗಳ ಬೆಳವಣಿಗೆಗೆ ಪೂರಕವಾಗುತ್ತದೆ.” ಎಂದು ಶುಭ ಹಾರೈಸಿದರು.ಉತ್ಸವ ಸಮಿತಿ ಅಧ್ಯಕ್ಷ ಜಯರಾಮ ಕಲ್ಲಾಜೆ ಸಭಾಧ್ಯಕ್ಷತೆ ವಹಿಸಿದ್ದರು. ಆರಾಧನಾ ಸಮಿತಿ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ, ಉತ್ಸವ ಸಮಿತಿ ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ, ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮ ನಿರ್ದೇಶಕ ಸತೀಶ್ ಪಂಜ ವೇದಿಕೆಗೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುದರ್ಶನ ಪಟ್ಟಾಜೆ ಪ್ರಾರ್ಥಿಸಿದರು.ಕೌಶಿಕ್ ಕುಳ ಸ್ವಾಗತಿಸಿದರು.ವಾಸುದೇವ ಮೇಲ್ಪಾಡಿ ವಂದಿಸಿದರು.
ಆ.31ರಂದು ಪೂರ್ವಾಹ್ನ ಗಂಟೆ 9 ರಿಂದ ಪ್ರತಿಷ್ಠೆ ಗಣಪತಿ ಹೋಮ, ಶ್ರೀ ಶಾರದಾಂಬಾ ಭಜನೆ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಗಂಟೆ 12.45 ರಿಂದ ಮಹಾಪೂಜೆ, ಪ್ರಸಾದ ವಿತರಣೆ ,ಅನ್ನ ಸಂತರ್ಪಣೆ, ಸಂಜೆ ಪಂಬೆತ್ತಾಡಿ ಪಂಚಶ್ರೀ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ಜರುಗಲಿದೆ. ಪೂರ್ವಾಹ್ನ ಗಂಟೆ 9.30ಕ್ಕೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ. ಕ್ರೀಡಾ ಸ್ಪರ್ಧೆಯನ್ನು ವಲಯ ಅರಣ್ಯಾಧಿಕಾರಿ ಮಂಜುನಾಥ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಉದ್ಘಾಟಿಸಲಿದ್ದಾರೆ. ಪೂರ್ವಾಹ್ನ ಗಂಟೆ.10 ರಿಂದ ಅಂಗನವಾಡಿ ಮತ್ತು ಎಲ್ ಕೆ ಜಿ, ಯು ಕೆ ಜಿ ಮಕ್ಕಳಿಗೆ ಕಪ್ಪೆ ಜಿಗಿತ, ಕಾಳು ಹೆಕ್ಕುವುದು. ಮಹಿಳೆಯರಿಗೆ ಮೂರು ಕಾಲಿನ ಓಟ, ಸ್ಕಿಪ್ಪಿಂಗ್ (ಹಗ್ಗ ಜಿಗಿತ), ಹುಡುಗಿಗೆ ಜಡೆ ಬರೆಯುವುದು, ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ. ಪುರುಷರಿಗೆ ನಿಧಾನ ದ್ವಿ-ಚಕ್ರ ವಾಹನ ಚಾಲನೆ, ನಿಧಾನ ಸೈಕಲ್ ಚಾಲನೆ, ವಾಲಿಬಾಲ್, ಹಗ್ಗ ಜಗ್ಗಾಟ, ಕಬಡ್ಡಿ ಜರುಗಲಿದೆ.ಸಾಂಸ್ಕೃತಿಕ ಸ್ಪರ್ಧೆಗಳು ಎಲ್ ಕೆ ಜಿ, ಯು ಕೆ ಜಿ, ಕಿರಿಯ, ಹಿರಿಯ, ಮಹಿಳಾ , ಸಾರ್ವಜನಿಕ ವಿಭಾಗ ಗಳಲ್ಲಿ ಜರುಗಲಿದೆ. ಪೂರ್ವಾಹ್ನ ಗಂಟೆ.9.30ರಿಂದ ರಂಗೋಲಿ, ರಸಪ್ರಶ್ನೆ, ಭಾಷಣ, ಅಪರಾಹ್ನ ಗಂಟೆ 3ರಿಂದ ಭಕ್ತಿ ಗೀತೆ ಮತ್ತು ಛದ್ಮವೇಷ ಜರುಗಲಿದೆ.ಪೂರ್ವಾಹ್ನ ಗಂಟೆ10 ರಿಂದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ ಜರುಗಲಿದೆ. ಪ್ರಥಮ ರೂ. 2000, ದ್ವಿತೀಯ ರೂ.1000 ನಗದು ಬಹುಮಾನವಿರುತ್ತದೆ. ಹಗ್ಗ ಜಗ್ಗಾಟ ಸ್ಪರ್ಧೆ ಪುರುಷರ ವಿಭಾಗದ ಸ್ಪರ್ಧೆ 7 ಸದಸ್ಯರ 500 ಕೆ.ಜಿ ತೂಕದ ತಂಡ ಆಗಿರಬೇಕು. ಪ್ರಥಮ ರೂ.2000,ದ್ವಿತೀಯ ರೂ.1000 ನಗದು ಬಹುಮಾನವಿರುತ್ತದೆ. ಮಹಿಳಾ ವಿಭಾಗದಲ್ಲಿ 7 ಸದಸ್ಯರ ಹೊಂದಿರುವ ತಂಡವಾಗಿರಬೇಕು. ಪ್ರಥಮ ರೂ‌.1500, ದ್ವಿತೀಯ ರೂ.1000 ನಗದು ಬಹುಮಾನವಿರುತ್ತದೆ. ಸೂರ್ಯ-ಹೊನಲು ಬೆಳಕಿನ ಪುರುಷರ 65 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟ ಮಧ್ಯಾಹ್ನ ಗಂಟೆ 2 ರಿಂದ ಪ್ರಾರಂಭಗೊಳ್ಳಲಿದೆ. ಪ್ರಥಮ ರೂ.5000, ದ್ವಿತೀಯ ರೂ 3000, ಸೆಮಿ ಫೈನಲ್ ನಲ್ಲಿ ನಿರ್ಗಮಿತ ಎರಡು ತಂಡಗಳಿಗೆ ತಲಾ 1 ಸಾವಿರ ನಗದು ಬಹುಮಾನವಿರುತ್ತದೆ.

ಸೆ.1. ರಂದು ಪೂರ್ವಾಹ್ನ ಗಂಟೆ 9ರಿಂದ ಬೆಳಗಿನ ಪೂಜೆ, ನಾಗತೀರ್ಥ ಪಂಚಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಗಂಟೆ 12:45 ರಿಂದ ಮಹಾಪೂಜೆ ಪ್ರಸಾದ ವಿತರಣೆ, ಸಂಜೆ ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಿಂದ ಭಜನಾ ಸಂಕೀರ್ತನೆ.ರಾತ್ರಿ ಗಂಟೆ 7.30ರಿಂದ ಸಭಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯ ಅಧ್ಯಕ್ಷ ಜಯರಾಮ ಕಲ್ಲಾಜೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಬಂದರು ,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಯಕ್ಷಗಾನ ಅರ್ಥಧಾರಿ ಮತ್ತು ಬರಹಗಾರ ರಾಧಾಕೃಷ್ಣ ಕಲ್ಚಾರ್ ವಿಟ್ಲ ಉಪನ್ಯಾಸ ನೀಡಲಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನೆ ನಿರ್ದೇಶಕ ಪ್ರವೀಣ್ ಕುಮಾರ್ ಬಹುಮಾನ ವಿತರಣೆ ಮಾಡಲಿದ್ದಾರೆ.ಬಳಿಕ ಮಹಾ ಪೂಜೆ, ಪ್ರಸಾದ ವಿತರಣೆ ಜರುಗಲಿದೆ.ಸಂಜೆ ಗಂಟೆ 6ರಿಂದ 7.30ರ ತನಕ ಗಾನ ವೈಭವ ಜರುಗಲಿದ್ದು ದಿನೇಶ್ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಪ್ರಶಾಂತ್ ರೈ ಪಂಜ, ರಚನಾ ಚಿದ್ಗಲ್ಲು ಹಾಡುಗಾರಿಕೆಯಲ್ಲಿ, ಆನಂದ ಪಡ್ರೆ ಚೆಂಡೆ ಮತ್ತು ಚಂದ್ರಶೇಖರ ಗುರುವಾಯನ ಕೆರೆ ಮದ್ದಲೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ರಾತ್ರಿ ಗಂಟೆ 9ರಿಂದ ಕುಸಲ್ದ ರಂಗ ಮಾಣಿಕ್ಯ ಸುಕೇಶ್ ಶೆಟ್ಟಿ ಪಡುಪದವು ನಿರ್ದೇಶನದ ರಂಗ ಕೇಸರಿ ರಮೇಶ್ ರೈ ಕುಕ್ಕುವಳ್ಳಿ ಸಾರಥ್ಯದ ಜೈ ಮಾತಾ ಕಲಾತಂಡ ತೆಲಿಕೆದ ಕಲಾವಿದರು ಮಂಗಳೂರು ಪ್ರಸ್ತುತಿಯ “ಒಂತೆ ಕಾಪುಲೆ”ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಸೆ. 2ರಂದು ಪೂರ್ವಾಹ್ನ ಗಂಟೆ 8:30 ರಿಂದ ಬೆಳಗಿನ ಪೂಜೆ, ಅಡ್ಡಬೈಲು ಶ್ರೀ ಕೃಷ್ಣ ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.ಸಂಜೆ ಗಂಟೆ 3ರಿಂದ ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ನಾಗತೀರ್ಥ ಸಂಗಮದಲ್ಲಿ ಜಲಸ್ತಂಭನ ಜರುಗಲಿದೆ.