ಅರಂತೋಡು : ಕರೆಂಟ್ ಶಾಕ್ ಹೊಡೆದು ದನ ಸಾವು

0

 

ವಿದ್ಯುತ್ ಟ್ರಾನ್ಸ್‌ಫಾರ್‍ಮರ್ ಕಂಬದ ಅಡಿಯಲ್ಲಿ ದನವೊಂದು ಮಲಗಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ದನ ಸಾವಿಗೀಡಾದ ಘಟನೆ ಅರಂತೋಡಿನಿಂದ ವರದಿಯಾಗಿದೆ.

ಅರಂತೋಡು ಮುಖ್ಯ ಪೇಟೆಯಲ್ಲಿ ಕೆ ಎ ಯು ಜನರಲ್ ಸ್ಟೋರ್ ಮುಂಭಾಗದಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ವಿದ್ಯುತ್ ಟ್ರಾನ್ಸ್‌ಫಾರ್‍ಮರ್ ಕಂಬದ ಅಡಿಯಲ್ಲಿ ಮಲಗಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ದನವೊಂದು ಸಾವಿಗೀಡಾಯಿತು.


ಸಮೀಪದ ಅಂಗಡಿ ಮಾಲಕರು ಪಂಚಾಯತ್ ರವರಿಗೆ ಮಾಹಿತಿ ನೀಡಿದರು. ಪ್ರತಿತಿಂಗಳ ಕೊನೆಯ ಆದಿತ್ಯವಾರದ ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿದ್ದ ಗ್ರಾ.ಪಂ ಉಪಾಧ್ಯಕ್ಷೆ ಶ್ವೇತಾ ,ಸದಸ್ಯ ಶಿವಾನಂದ ಕುಕ್ಕುಂಬಳ,ಪಿಡಿಓ ಜಯಪ್ರಕಾಶ್ ಘಟನ ಸ್ಥಳಕ್ಕೆ ಭೇಟಿ ನೀಡಿ ಮೆಸ್ಕಾಂ ನವರಿಗೆ ಮಾಹಿತಿ ನೀಡಿದರು.