ಮಾಚ್೯ನ ಒಳಗೆ ರಾಜ್ಯಾದ್ಯಂತ 16 ಲಕ್ಷ ಮನೆಗಳು ಫಲಾನುಭವಿಗಳಿಗೆ ಹಸ್ತಾಂತರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಭ್ರಷ್ಠಾಚಾರ ತಡೆಯುವ ಸಲುವಾಗಿ ಇಲಾಖೆಗೆ ಪ್ರತ್ಯೇಕ ಆಪ್ : ವಿ. ಸೋಮಣ್ಣ

ಮುಂದಿನ ಮಾರ್ಚ್ ನೊಳಗೆ ರಾಜ್ಯಾದ್ಯಂತ 16 ಲಕ್ಷ ಮನೆಗಳು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು.
ಭ್ರಷ್ಠಾಚಾರ ತಡೆಯಲು ಸಲುವಾಗಿ ಇಲಾಖೆಗೆ ಪ್ರತ್ಯೇಕ ಆಪ್ ಮಾಡಲಾಗಿದೆ. ಆ ಮೂಲಕ ಪಾರದರ್ಶಕ ವ್ಯವಸ್ಥೆಗೆ ಯೋಜನೆ ಸಿದ್ದಪಡಿಸಲಾಗಿದೆ
ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ವಸತಿ ಮತ್ತು ಮೂಲ ಸೌಕರ್ಯ ಸಚಿವ ವಿ.ಸೋಮಣ್ಣ ಅವರು ಆ.೨೭ ರಂದು ಹೇಳಿದರು.

ರಾಷ್ಟ್ರಕ್ಕೆ ವಸತಿ ವ್ಯವಸ್ಥೆಯಲ್ಲಿ ಒಂದೇ ವಿಷನ್ ತರಬೇಕೆಂಬ ಪ್ರಧಾನ ಮಂತ್ರಿಗಳ ಆಶಯದಂತೆ ರಾಜ್ಯದಲ್ಲಿ ಕೂಡಾ ವಸತಿ ಯೋಜನೆಯ ವ್ಯವಸ್ಥೆಗೆ ಒಂದೇ ವಿಷನ್ ಜಾರಿಗೆ ತರಲಾಗಿದೆ. ಹಿಂದೆ ಇದ್ದ ಸರಕಾರ ಮಾಡಿದ ಲೋಪಗಳನ್ನು ಸರಿಪಡಿಸಿಕೊಂಡು ಇಡೀ ರಾಜ್ಯಕ್ಕೆ ಒಂದೇ ಸಾಪ್ಟ್ ವೇರ್ ಆರಂಭಿಸಿ ನಿಜವಾದ ಬಡವರು ಯಾರಿದ್ದಾರೆ ಅವರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಸುಮಾರು ೭ ಸಾವಿರ ಕೋಟಿ ಹಣವನ್ನು ಅವರವರ ಖಾತೆಗೆ ಜಮಾ ಮಾಡುವ ವ್ಯವಸ್ಥೆಯನ್ನು ಪಾರದರ್ಶಕವಾಗಿ ಮಾಡಲಾಗಿದೆ.
ಅಲ್ಲದೆ ಈ ಹಿಂದಿನ ಸರಕಾರದ ಕಾಲದಲ್ಲಿ ಹಣಬಿಡುಗಡೆಯಾಗದವರಿಗೆ ಹಣ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ಅವರುಮುಖ್ಯಮಂತ್ರಿ ಗಳಾದ ಬಳಿಕ ೫ ಲಕ್ಷ ಮನೆಗಳನ್ನು ಗ್ರಾಮೀಣ ಪ್ರದೇಶಕ್ಕೆ ೧ ಲಕ್ಷ ಮನೆಗಳನ್ನು ನಗರ ಪ್ರದೇಶಕ್ಕೆ ನೀಡಿದ್ದಾರೆ. ೫ಲಕ್ಷ ಮನೆಗಳಲ್ಲಿ ೨ಲಕ್ಷದ ೩೪ ಸಾವಿರ ಮನೆಗಳ ನಿರ್ಮಾಣ ಕಾರ್ಯಾರಂಭವಾಗಿದೆ ಎಂದು ವಸತಿ ಮತ್ತು ಮೂಲ ಸೌಕರ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸುಮಾರು ೭೫೦ ಪಂಚಾಯತ್ ಗಳನ್ನು ಆಯ್ಕೆ ಮಾಡಿ ಲಕ್ಷಾಂತರ ಮನೆಗಳನ್ನು ನೀಡಲಾಗಿದೆ.ಈಗಾಗಲೇ ಕೆಲಸ ಆರಂಭವಾಗಿದೆ ಎಂದರು.
೬ ಲಕ್ಷ ಮನೆಗಳು ಸೇರಿದಂತೆ ಹಿಂದಿನ ಸರಕಾರದ ಕಾಲದಲ್ಲಿ ಬಾಕಿ ಉಳಿದ ೧೦ಲಕ್ಷ ಮನೆಗಳು ನಿರ್ಮಾಣಗೊಳ್ಳಲಿದೆ. ಇದರಲ್ಲಿ ೬ ಲಕ್ಷ ಮನೆಗಳ ನಿರ್ಮಾಣ ಈಗಾಗಲೇ ಸಮಾಪ್ತಿ ಯಾಗಿದೆ. ಉಳಿದ ಮನೆಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾಚ್೯ ನ ಒಳಗೆ ಎಲ್ಲಾ ೧೬ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಸಾಮಾನ್ಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಗುಣಮಟ್ಟದ ನಿವಾಸ ನಿರ್ಮಿಸಿ ನೀಡಲಾಗುವುದು ಎಂದು ನುಡಿದರು.
ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆದಾಯದ ಮಿತಿಯನ್ನು ೨ಲಕ್ಷಕ್ಕೆ ಏರಿಸಲಾಗಿದೆ. ಇತರ ಹಿಂದುಳಿದ ವರ್ಗದವರಿಗೆ ಇದ್ದವರಿಗೆ ವಾರ್ಷಿಕ ಆದಾಯವನ್ನು ೧ಲಕ್ಷದ ೨೦ ಸಾವಿರಕ್ಕೆ ಏರಿಸಲಾಗಿದೆ.ಅಲ್ಲದೆ ಬಿಪಿಎಲ್ ಕಾಡ್೯ ಇದ್ದವರಿಗೆ ಸರಕಾರದಿಂದ ಅನುಕೂಲ ಸೃಷ್ಟಿ ಮಾಡಲಾಗಿದೆ ಎಂದು ಹೇಳಿದರು.
ಬ್ರಷ್ಠಾಚಾರ ತಡೆಯಲು ಸಲುವಾಗಿ ಇಲಾಖೆಗೆ ಪ್ರತ್ಯೇಕ ಆಪ್ ಮಾಡಲಾಗಿದೆ. ಈ ಮೂಲಕ ಪಾರದರ್ಶಕ ವ್ಯವಸ್ಥೆ ಗೆ ಯೋಜನೆ ಸಿದ್ದಪಡಿಸಲಾಗಿದೆ. ಈ ರೀತಿ ಇಲಾಖೆಗೆ ಹೊಸ ಸಾಪ್ಟ್ ವೇರ್ ಸಿದ್ದಪಡಿಸಿ ಸಾಮಾನ್ಯರಿಗೆ ಮತ್ತು ಬಡವರಿಗೆ ಪಾರದರ್ಶಕವಾಗಿ ಯೋಜನೆಗಳು ದೊರಕುವಂತೆ ಮಾಡಿರುವುದು ರಾಷ್ಟ್ರಕ್ಕೆ ಮೊದಲನೆಯದಾಗಿದೆ.
ನೆರೆ ಇತ್ಯಾದಿಗಳಿಂದ ಮನೆ ಹಾನಿಯಾದವರಿಗೆ ಪರಿಹಾರ ವಿತರಿಸಲು ಎ ಬಿ ಸಿ ಎಂಬ ವಿಂಗಡಣೆ ಇತ್ತು ಅದನ್ನು ತೆಗೆದುಹಾಕಿ ಸರಳೀಕರಣ ಗೊಳಿಸಲಾಗಿದೆ. ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ನುಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.