ವೆರಿಗುಡ್ ಭಟ್ರಿಗೆ ಸಾರ್ವಜನಿಕ ಸನ್ಮಾನಕ್ಕೆ ನಿರ್ಧಾರ

0

 

ಸುಳ್ಯ ತಾಲೂಕು ಬಿ.ಎಂ.ಎಸ್. ಅಧ್ಯಕ್ಷರಾಗಿರುವ ಪೈಚಾರು ಗೋಪಾಲಕೃಷ್ಣ ಭಟ್ ( ವೆರಿಗುಡ್ ಭಟ್ ) ರವರಿಗೆ 75 ವರ್ಷ ತುಂಬಿದ್ದು ಅವರನ್ನು ಸಾರ್ವಜನಿಕ ನೆಲೆಯಲ್ಲಿ ಸನ್ಮಾನಿಸಲು ಅವರ ಅಭಿಮಾನಿ ಬಳಗ ನಿರ್ಧರಿಸಿದೆ.

ಆ.27 ರಂದು ಪರಿವಾರಕಾನದ ಧರ್ಮಾರಣ್ಯದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕುಮಾರಸ್ವಾಮಿ ತೆಕ್ಕುಂಜ ಅವರು, ಗೋಪಾಲಕೃಷ್ಣ ಭಟ್ಟರ ವ್ಯಕ್ತಿತ್ವ, ಸಮಾಜಕ್ಕೆ ಅವರ ಕೊಡುಗೆಗಳ ಬಗ್ಗೆ ತಿಳಿಸಿ ಅಭಿನಂದನಾ ಸಮಾರಂಭದ ರೂಪುರೇಷೆಗಳನ್ನು ಸಭೆಯ ಮುಂದೆ ಮಂಡಿಸಿದರು.
ಸುಳ್ಯ ತಾಲೂಕು ರಿಕ್ಷಾ ಚಾಲಕ ಮಾಲಕರ ಸಂಘ ಮತ್ತು ಇತರ ಸಂಘ ಸಂಸ್ಥೆಯವರನ್ನು ಸೇರಿಸಿಕೊಂಡು ಏರ್ಪಡಿಸಲಾಗುವ ಈ ಅಭಿನಂದನಾ ಕಾರ್ಯಕ್ರಮವನ್ನು ಡಿಸೆಂಬರ್ ತಿಂಗಳಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.

ಕಾರ್ಯಕ್ರಮದ ಸಂಘಟನೆಗಾಗಿ ಗಿರೀಶ್ ಭಾರದ್ವಾಜರ ಗೌರವಾಧ್ಯಕ್ಷತೆಯಲ್ಲಿ , ಅಶೋಕ ಪ್ರಭುಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು. ಸಮಿತಿಯ ಕಾರ್ಯದರ್ಶಿಯಾಗಿ ಭಾಸ್ಕರ ರಾವ್, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಸರಳಿಕುಂಜ ಆಯ್ಕೆಯಾದರು.

ಅಭಿನಂದನಾ ಗ್ರಂಥ ರಚನೆಗಾಗಿ ಕುಮಾರಸ್ವಾಮಿ ತೆಕ್ಕುಂಜರವರ ನೇತೃತ್ವದಲ್ಲಿ ಹರೀಶ್ ಬಂಟ್ವಾಳ್, ಶ್ರೀಮತಿ ಡಾ. ವಿದ್ಯಾ ಶಾರದ ಹಾಗೂ ಶ್ರೀಮತಿ ಶ್ರೀದೇವಿ ನಾಗರಾಜ್ ರವರಿರುವ ತಂಡವನ್ನು ರಚಿಸಲಾಯಿತು.

ತಾಳಮದ್ದಳೆಯ ಸಂಯೋಜನೆಯನ್ನು ಶ್ಯಾಮ್ ಭಟ್ ಲ್ಯಾಬ್ ಅವರಿಗೆ ವಹಿಸಲಾಯಿತು.

ಆರ್ಥಿಕ ಸಮಿತಿ ಮತ್ತು ಇತರ ಸಮಿತಿಗಳನ್ನು ಮುಂದಿನ ಸಭೆಯಲ್ಲಿ ಚರ್ಚಿಸಿ ರೂಪಿಸಲು ನಿರ್ಧರಿಸಲಾಯಿತು.
ಇಂಜಿನಿಯರ್ ಕೃಷ್ಣ ರಾವ್ ನಾವೂರು, ಜಗದೀಶ್ ಪಡ್ಪು, ರಾಮಮೋಹನ್ ಯು.ಎಸ್., ವಿಷ್ಣುಕಿರಣ್ ನೀರಬಿದಿರೆ, ಗಿರೀಶ್ ಭಾರದ್ವಾಜ್, ಅಶೋಕ್ ಪ್ರಭು, ನ್ಯಾಯವಾದಿ ಭಾಸ್ಕರ ರಾವ್, ಕೃಷ್ಣಮೂರ್ತಿ ಸರಳಿಕುಂಜ, ಶ್ಯಾಮ್ ಭಟ್, ಹರೀಶ್ ಬಂಟ್ವಾಳ್ ಸಭೆಯಲ್ಲಿ ಉಪಸ್ಥಿತರಿದ್ದರು.