ಮರ್ಕಂಜ : 6ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

 

ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಗೋಳಿಯಡ್ಕ ಮರ್ಕಂಜ ಇದರ ವತಿಯಿಂದ 6ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯು ಆ.31ರಂದು ಮರ್ಕಂಜದ ಗೋಳಿಯಡ್ಕ ವಠಾರದಲ್ಲಿ ನಡೆಯಲಿದೆ.
ಬೆಳಿಗ್ಗೆ ಶಿವಶಂಕರ ಭಟ್ ಸುಳ್ಯ ಇವರ ನೇತೃತ್ವದಲ್ಲಿ ಗಣಪತಿ ಹವನ, ಗಣಪತಿ ವಿಗ್ರಹದ ಆಗಮನ, ವಿಗ್ರಹ ಪ್ರತಿಷ್ಠಾಪನೆ ನಂತರ ಬೆಳಗ್ಗಿನ ಪೂಜೆ ನಡೆಯಲಿದೆ. ಬಳಿಕ ಸ್ಪೂರ್ತಿ ಮಹಿಳಾ ಮಂಡಳಿ, ಶೃತಿ ಯುವತಿ ಮಂಡಳಿ ಮರ್ಕಂಜ, ಶ್ರೀ ಮಹಾವಿಷ್ಣು ಭಜನಾ ಮಂಡಳಿ ಕಾವೂರು, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಂಗಡಿಮಜಲು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮಿನುಂಗೂರು ತಂಡಗಳಿಂದ ಭಜನಾ ಸೇವೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

ಸಂಜೆ 3ರಿಂದ ಗೋಳಿಯಡ್ಕ, ಅಂಗಡಿಮಜಲು, ಬಲ್ನಾಡ್ ಪೇಟೆ, ತೇರ್ಥಮಜಲು ಮಾರ್ಗವಾಗಿ ವಿಜೃಂಭಣೆಯ ಶೋಭಾಯಾತ್ರೆ ನಡೆದು ಕಾಯಿಪಳ್ಳದಲ್ಲಿ ಜಲಸ್ಥಂಭನಗೊಳ್ಳುವುದು.