ಆ.30ರಂದು ಅಡ್ಕಾರು ಕೆ.ಎಸ್.ಎ. ಕಾಮತ್ & ಸನ್ಸ್ 50ನೇ ವರ್ಷಕ್ಕೆ ಪಾದಾರ್ಪಣೆ

0

 

ಗ್ರಾಹಕರ ಬೇಡಿಕೆಯ ಮೇರೆಗೆ ಗೋಡಂಬಿಯ ನೂರು ಗ್ರಾಂ. ಬ್ರಾಂಡೆಡ್ ಪೌಚ್ ಮಾರುಕಟ್ಟೆಗೆ ಬಿಡುಗಡೆ

 

ಜಾಲ್ಸೂರು ಗ್ರಾಮದ ಅಡ್ಕಾರು ವಿನೋಬನಗರದಲ್ಲಿ ಕಳೆದ 49 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಕೆ. ಸುಬ್ರಾಯ ಅನಂತ ಕಾಮತ್ & ಸನ್ಸ್ ಸಂಸ್ಥೆಯು ಐವತ್ತನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಪ್ರಯುಕ್ತ ಗ್ರಾಹಕರ ಬೇಡಿಕೆಯ ಮೇರೆಗೆ ಗೋಡಂಬಿಯ ನೂರು ಗ್ರಾಂನ ಪೌಚನ್ನು ಗೌರಿ – ಗಣೇಶ ಹಬ್ಬದ ದಿನವಾದ ಆ.30ರಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ಸಂಸ್ಥೆಯ ಮಾಲಕರಾದ ಕೆ. ಸುಧಾಕರ ಕಾಮತ್ ಅವರು ತಿಳಿಸಿದ್ದಾರೆ.