ಹಳೆಗೇಟು ಸಾಂಸ್ಕೃತಿಕ ಸಂಘದ ವತಿಯಿಂದ 39ನೇ ವರ್ಷದ ಗಣೇಶೋತ್ಸವ

0

 

ಸುಳ್ಯ ಹಳೆಗೇಟು ಸಾಂಸ್ಕೃತಿಕ ಸಂಘದ ವತಿಯಿಂದ
39ನೇ ವರ್ಷದ ಶ್ರೀ ಗಣೇಶೋತ್ಸವ ನಡೆಯಲಿದೆ.
ಆಗಸ್ಟ್ 31ರಂದು ಬೆಳಿಗ್ಗೆ ಎಂಟು ಗಂಟೆಗೆ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದೆ.
ಗಣೇಶೋತ್ಸವದ ಅಂಗವಾಗಿ ಮೂರು ದಿನಗಳ ಧಾರ್ಮಿಕ, ವೈದಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 31ರಂದು ಬೆಳಿಗ್ಗೆ ಗಂಟೆ 7 ಕ್ಕೆ ಗಣಪತಿ ಹೋಮ ನಡೆಯಲಿದ್ದು 8 ಗಂಟೆಗೆ ವಿಗ್ರಹ ಪ್ರತಿಷ್ಠಾಾಪನೆ ನಡೆಯಲಿದೆ.
ಮಧ್ಯಾಾಹ್ನ ಗಂಟೆ 12-30ಕ್ಕೆ ಮಹಾಪೂಜೆ
ಸಂಜೆ ಗಂಟೆ 6-30 ಕ್ಕೆ ಸಂಘದ ಹಿರಿಯರಿಂದ ದೀಪ ಬೆಳಗಿಸಿ ಉದ್ಘಾಾಟನೆ ನಡೆಯಲಿದೆ.
ರಾತ್ರಿ ಗಂಟೆ 7-30ಕ್ಕೆ ರಂಗ ಮಯೂರಿ ಕಲಾಶಾಲೆ ಸುಳ್ಯ ದ.ಕ. ಇದರ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ
ಹಾಗೂ ಯಕ್ಷತಂಡ ಸುಳ್ಯದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ಯಕ್ಷಗಾನ ‘‘ಚಂದ್ರಹಾಸ ’’ (ಮಕ್ಕಳ ಯಕ್ಷಗಾನ) ಕಾರ್ಯಕ್ರಮ ನಡೆಯಲಿದೆ.01-09-2022 ಗುರುವಾರ ಬೆಳಿಗ್ಗೆ ಗಂಟೆ 8-00ಕ್ಕೆ ಪೂಜೆ ಅಪರಾಹ್ನ ಗಂಟೆ 1 ಗಂಟೆಗೆ ಮಹಾಪೂಜೆ
ಸಂಜೆ ಗಂಟೆ 6 ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 7-30ಕ್ಕೆ ಉಡುಪಿ ಪಾಂಡುರಂಗ, ಎಸ್.ಪಡ್ಡಮ್ ಅರ್ಪಿಸುವ ವಾದ್ಯ ವೈವಿಧ್ಯ ಸಂಗೀತ ರಸ ಮಂಜರಿ ಕಾರ್ಯಕ್ರಮ
(ಮೈನವಿರೇಳಿಸುವ ವಾದ್ಯ ಗೋಷ್ಠಿಮತ್ತು ಸಂಗೀತ) ಕಾರ್ಯಕ್ರಮ ನಡೆಯಲಿದೆ.
02-09-2022 ಶುಕ್ರವಾರ ಬೆಳಿಗ್ಗೆ ಗಂಟೆ 8-00ಕ್ಕೆ ಪೂಜೆ
ಅಪರಾಹ್ನ ಒಂದು ಗಂಟೆಗೆ ಮಹಾಪೂಜೆ 1-30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 4-00 ರಿಂದ ದೀಪಾಲಂಕಾರದ ವಾಹನದಲ್ಲಿ ವೈಭವದ ಶೋಭಾಯಾತ್ರೆ ನಡೆಯಲಿದ್ದು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡುವಂತೆ ಸಂಘಟಕರು ಪತ್ರಿಕ ಪ್ರಕಟಣೆ ಮೂಲಕ ತಿಳಿಸಿದ್ದಾರೆ.