ಬೆಳ್ಳಾರೆಯಲ್ಲಿ ಸ್ವಾತಂತ್ರ್ಯ ನಡಿಗೆ ಪೂರ್ವಭಾವಿ ಸಭೆ

0

 

ಕರಾವಳಿಯಲ್ಲಿ ಮಾನವೀಯ ಸಂಬಂಧ ಕೆಡಿಸಿ ರಾಜಕೀಯ – ಭರತ್ ಮುಂಡೋಡಿ

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆ. 30 ರಂದು ನಡೆಯುವ ಸ್ವಾತಂತ್ರ್ಯ ನಡಿಗೆ ಪೂರ್ವ ಭಾವಿ ಸಭೆ ಬೆಳ್ಳಾರೆ ಕಲ್ಪವ್ರಕ್ಷ ಆರ್ಕೇಡ್ ನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ. ಸಿ ಜಯರಾಮ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಭರತ್ ಮುಂಡೋಡಿ ಮಾತಾನಾಡಿ ” ಬಿಜೆಪಿ ಗೆ ಈಗ ರಾಷ್ಟ್ರ ಪ್ರೇಮ ನೆನಪಿಗೆ ಬಂದಿದೆ,ಆರ್ ಎಸ್ ಎಸ್ ಕಚೇರಿಯಲ್ಲಿ ಯಾವಾಗ ರಾಷ್ಟ್ರ ಧ್ವಜ ಹಾರಿಸಲು ಪ್ರಾರಂಭಿಸಿದರು ? ರಾಷ್ಟ್ರ ಧ್ವಜ ಮಾರಾಟ ಮಾಡುವ ಹೀನಾಯ ಸ್ಥಿತಿಗೆ ಬಿಜೆಪಿ ಸರ್ಕಾರ ಕಾರಣವಾಗಿದೆ, ಸಾಮರಸ್ಯ ಜೀವನ ಹಾಳುಮಾಡುವುದನ್ನು ಸಹಿಸಲು ಸಾಧ್ಯವಿಲ್ಲ,ಇದರ ಬಗ್ಗೆ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡುವ ಎಂದರು, ಕೆಪಿಸಿಸಿ ಸಂಯೋಜಕರಾದ ವೆಂಕಪ್ಪ ಗೌಡ ಹಾಗೂ ಕೃಷ್ಣಪ್ಪ ಮಾತಾನಾಡಿದರು.

ಕೆಪಿಸಿಸಿ ಸಂಯೋಜಕ ಪ್ರದೀಪ್ ರೈ ಪಾಂಬಾರು, ಬೆಳ್ಳಾರೆ ಸಿ ಎ ಬ್ಯಾಂಕ್ ಅಧ್ಯಕ್ಷರಾದ ಅನಿಲ್ ರೈ ಚಾವಡಿ ಬಾಗಿಲು, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸಚಿನ್ ರಾಜ್ ಶೆಟ್ಟಿ, ಬೆಳ್ಳಾರೆ ಗ್ರಾಮ ಸಮಿತಿ ಅಧ್ಯಕ್ಷ ರಾದ ಅನಿಲ್ ರೈ ಪುಡ್ಕಜೆ, ಹಿಂದುಳಿದ ವರ್ಗಗಳ ಅಧ್ಯಕ್ಷ ರಾದ ವಿಠಲ್ ದಾಸ್, ಮಾಜಿ ಅಧ್ಯಕ್ಷೆ ಶ್ರೀಮತಿ ಅನುಸೂಯ, ಬೆಳ್ಳಾರೆ ಸಿ ಎ ಬ್ಯಾಂಕ್ ಉಪಾಧ್ಯಕ್ಷ ಅಬ್ದುಲ್ ಬಶೀರ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾದ ಕಂದಸ್ವಾಮಿ, ಮುಸ್ತಫಾ, ಬಶೀರ್ ನೇಲ್ಯಮಜಲು, ಬಶೀರ್ ಉಮಿಕ್ಕಳ, ರಘುನಾಥ ರೈ ಕೊಡಿಯಾಲ, ಲಕ್ಷ್ಮಣ ದುರ್ಗಾ ನಗರ, ಉಮ್ಮರ್ ಪೆರುವಾಜೆ, ಕರುಣಾಕರ ದುರ್ಗಾ ನಗರ, ವಿಜಯ ದುರ್ಗಾ ನಗರ, ದಿನೇಶ್ ದುರ್ಗಾ ನಗರ , ರಜಾಕ್ ಬಸ್ತಿಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.