ಕಡಮಕಲ್ಲು ಎಸ್ಟೇಟ್ ಭೂ ಕುಸಿತ

0

 

ತುಂಬಿ ಹರಿಯುತ್ತಿದೆ ನದಿ ನೀರು, ಕೊಚ್ಚಿ ಬಂದ ಮಣ್ಣು, ಮರ

ಮೂರನೇ ಭಾರಿ ಕೊಚ್ಚಿ ಹೋದ ಉಪ್ಪುಕಳ ಕಾಲು ಸೇತುವೆ

ಕಡಮಕಲ್ಲು ಎಸ್ಟೇಟ್ ನಿಂದಲೂ ಮೇಲೆ ನಿನ್ನೆ ರಾತ್ರಿ ಭಾರಿ ಪ್ರಮಾಣದ ಭೂ ಕುಸಿತ ಉಂಟಾಗಿ ನದಿ ನೀರು ತುಂಬಿ ಹರಿಯುತ್ತಿರುವುದಾಗಿ ವರದಿಯಾಗಿದೆ. ನದಿ ನೀರು ತುಂಬಿ ಹರಿಯುತ್ತಿದ್ದು ಮಣ್ಣು ಕೊಚ್ಚಿ ಬಂದಿದೆ, ಮರಗಳು ಕೊಚ್ಚಿ ಬಂದು ಕಿಂಡಿ ಅಣೆಕಟ್ಟುಗಳಲ್ಲಿ ತುಂಬಿದೆ. ಕಲ್ಮಕಾರಿನ ಬೈಲು ಎಂಬಲ್ಲಿ ಕಿಂಡಿ ಅಣೆಕಟ್ಟು ಸಂಪೂರ್ಣ ಮರಗಳಿಂದ ತುಂಬಿದೆ. ಉಪ್ಪುಕಳ ಭಾಗದಲ್ಲೂ ಮಳೆಯಾಗಿದ್ದು ಉಪ್ಪುಕಳದ ಕಾಲು ಸೇತುವೆ ಮತ್ತೆ ಕೊಚ್ಚಿ ಹೋಗಿ ಈ ಮಳೆಗಾಲ ಮೂರನೇ ಭಾರಿ ಸೇತುವೆ ಕೊಚ್ಚಿ ಹೋಗಿರುವುದಾಗಿ ತಿಳಿದುಬಂದಿದೆ.