ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ 32 ನೇ ವರ್ಷದ ವಾರ್ಷಿಕೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸಂಸ್ಕಾರಯುತ ಬದುಕು, ಮೌಲ್ಯಾಧಾರಿತ ಶಿಕ್ಷಣ ಅಗತ್ಯ : ರಾಜರಾಂ ಸೂರ್‍ಯಂಬೈಲು

ಭಾರತದ ಶಿಕ್ಷಣದಲ್ಲಿ ಮಹತ್ತರ ಸಾಧನೆಗೈಯುತ್ತಿದೆ. ಇಂದಿನ ಶಿಕ್ಷಣ ಸರ್ಟಿಫೀಕೇಟ್ ಕೋರ್ಸ್‌ಗಳಾಗಿ ಪರಿವರ್ತನೆಗೊಳ್ಳುತ್ತಿದೆ. ವಿದ್ಯೆ, ದಾನ, ಶೀಲ, ಗುಣ ಮೊದಲಾದವುಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳಿಗೆ ಜ್ಞಾನ,ಸಹನೆ ಅತೀ ಮುಖ್ಯ ಉತ್ತಮ ಸಾಧನೆ ಮಾಡುವ ಗುಣ ಬೆಳೆಸಿಕೊಳ್ಳಿ ಉತ್ತಮ ಮನುಷ್ಯನ್ನಾಗಿ ರೂಪಿಸುವುದು ವಿದ್ಯಾಭ್ಯಾಸದ ಗುರಿಯಾಗಿರಬೇಕು ಎಂದು ಕರ್ನಾಟಕ ರಾಜ್ಯ ಉಚ್ಫನ್ಯಾಯಾಲಯದ ನ್ಯಾಯಾವಾದಿ, ಸೆಂಟ್ರಲ್ ಗವರ್ನಮೆಂಟ್ ಕೌನ್ಸೆಲ್, ಮುಖ್ಯ ಅತಿಥಿ ರಾಜರಾಂ ಸೂರ್‍ಯಂಬೈಲು ಹೇಳಿದರು. ಅವರು ಸುಳ್ಯ ಕೆ.ವಿ.ಜಿ ಕಾನೂನು ಮಹಾವಿದ್ಯಾಲದಲ್ಲಿ ನಡೆದ ೩೨ನೇ ವಾರ್ಷಿಕೋತ್ಸವದಲ್ಲಿ ಪ್ರಧಾನ ಭಾಷಣ ನೆರವೇರಿಸಿ ಮಾತನಾಡಿದರು.
ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ೩೨ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಆ. ೨೯ರಂದು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪಾಂಶುಪಾಲರಾದ ಉದಯಕೃಷ್ಣ ಬಿ ವಹಿಸಿದ್ದರು. ವೇದಿಕೆಯಲ್ಲಿ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಶೈಕ್ಷಣಿಕ ಸಲಹೆಗಾರರಾದ ಹೇಮನಾಧ ಕೆ.ವಿ, ವಿಧ್ಯಾರ್ಥಿ ಕ್ಷೇಮಾಧಿಕಾರಿ ಶ್ರೀಮತಿ ಟೀನಾ ಹೆಚ್.ಎಸ್ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರತಾಪ್, ಪದಾಧಿಕಾರಿಗಳಾದ ಕಾರ್ತಿಕ್, ಮಾನಸ, ಅನಘಾ ಉಪಸ್ಧಿತರಿದ್ದರು.

ಎಸ್.ಡಿ.ಎಮ್ ಕಾನೂನು ಮಹಾವಿದ್ಯಾಲಯ ಮಂಗಳೂರಿನ ಸಹಾಯಕ ಪ್ರಾಧ್ಯಾಪಕ ಡಾ| ಸಂತೋಷ್ ಪ್ರಭು ಅವರು ಮಾತನಾಡಿ ಕಾನೂನಿನಲ್ಲಿ ಸಾಹಿತ್ಯ ಬಹಳ ಅಗತ್ಯ. ಕಲಿಕೆ ಮತ್ತು ವೃತ್ತಿ ಬದುಕಿನಲ್ಲಿ ಮಾಹಿತಿ ಸಂಗ್ರಹಣೆ, ಮಾಹಿತಿ ವರ್ಗಾವಣೆ ಕಾರ್ಯ ನಿರಂತರವಾಗಿ ಆಗಬೇಕು. ಹೊಸತನವನ್ನು ಅನ್ವೇಷಿಸುವ ಕಲಿಕೆಯನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಂದು ವಿಷಯದಲ್ಲಿ ಅವಲೋಕನ ಗುಣ ಬಹಳ ಮುಖ್ಯ ಎಂದರು. ಜ್ಞಾನ, ಅನುಭವ ನಮಗೆ ಗೌರವ ತಂದು ಕೊಡುತ್ತದೆ. ನಿಮಗೆ ನೀವೇ ಸ್ಪರ್ಧಿಗಳು. ನಿಮ್ಮ ಕೆಲಸವನ್ನು ಗೌರವಿಸಿ ಸರಳವಾಗಿ ಪ್ರಾಮಾಣಿಕವಾಗಿ ?ಜೀವನ ನಡೆಸಿದಾಗ ಯಶಸ್ಸುಗಳಿಸಲು ಸಾಧ್ಯ ಎಂದು ಹೇಳಿದರು.
೨೦೨೧-೨೨ರಲ್ಲಿ ಕಾನೂನು ಪದವಿಯಲ್ಲಿ ರ್‍ಯಾಂಕ್ ಗಳಿಸಿದ ವಿದ್ಯಾರ್ಥಿನಿಯರಾದ ಜೋಸ್ವಿತಾ ಪ್ರಿಮಿತ ಮತ್ತು ದಿಲ್ನಾ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಅನೀಶ ಮತ್ತು ಬಳಗದವರು ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಉದಯಕೃಷ್ಣ.ಬಿ ಸ್ವಾಗತಿಸಿದರು. ವಿಧ್ಯಾರ್ಥಿ ಕ್ಷೇಮಾಧಿಕಾರಿ ಶ್ರೀಮತಿ ಟೀನಾ ಹೆಚ್.ಎಸ್ ವರದಿ ವಾಚಿಸಿದರು. ಉಪನ್ಯಾಸಕ ಜಯರಾಮ್ ವೈ ಶೈಕ್ಷಣಿಕ ಸಾಧಕರ ಪಟ್ಟಿ ವಾಚಿಸಿದರು. ಉಪನ್ಯಾಸಕರಾದ ಶರ್ಮಿಳಾ ರೈ ಮತ್ತು ಆರ್ಚನ ರೈ ಅತಿಥಿಗಳನ್ನು ಪರಿಚಯಿಸಿದರು. ಸ್ವರ್ಧಾ ವಿಜೇತರ ಪಟ್ಟಿಯನ್ನು ಉಪನ್ಯಾಸಕರಾದ ರಶ್ಮಿ ಹೆಚ್, ರಾಜೇಂದ್ರ ಪ್ರಸಾದ್, ಟೀನಾ ವಾಚಿಸಿದರು.
ಉಪನ್ಯಾಸಕಿ ಕಲಾವತಿ ಎಮ್ ನಿರೂಪಿಸಿದರು. ಉಪನ್ಯಾಸಕ ರಂಜನ್ ಕೆ. ಎನ್ ವಂದಿಸಿದರು. ಉಪನ್ಯಾಸಕಿ ಉಷಾ ಸಿ ಶೆಟ್ಟಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕ್ರತಿಕ ವೈವಿಧ್ಯ ನಡೆಯಿತು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.