ಸುಳ್ಯ ಸೈಂಟ್ ಜೋಸೆಫ್ ಶಾಲೆಗೆ ತಾಲೂಕು ಗೀತಗಾಯನ ಸ್ಪರ್ಧೆಯಲ್ಲಿ ಪ್ರಥಮ‌ ಸ್ಥಾನ

0

 

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸುಳ್ಯ ಇವರ ಆಶ್ರಯದಲ್ಲಿ ರೋಟರಿ ಪ್ರಾಥಮಿಕ ಶಾಲೆ ಇಲ್ಲಿ ನಡೆದ ತಾಲೂಕು ಮಟ್ಟದ ದೇಶಭಕ್ತಿಗೀತೆಗಳ ಗೀತಗಾಯನ ಸ್ಪರ್ಧೆಯಲ್ಲಿ ಸೈಂಟ್ ಜೋಸೆಫ್ ಶಾಲಾ ಸ್ಕೌಟ್ಸ್ ವಿಭಾಗದ ಅಶ್ವಿಜ್ ಅತ್ರೇಯ ಮತ್ತು ತಂಡವು ಪ್ರಥಮ ಸ್ಥಾನ, ಬುಲ್‌ಬುಲ್ ವಿಭಾಗದ ಸಾಯಿನಕ್ಷತ್ರ ಪ್ರಥಮ ಸ್ಥಾನ ಹಾಗೂ ಕಬ್ಸ್ ವಿಭಾಗದ ನಂದನ್ ತೃತೀಯ ಸ್ಥಾನವನ್ನು ಪಡೆಯುವುದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರನ್ನು ಶಾಲಾ ವತಿಯಿಂದ ಶಾಲಾ ಸಂಚಾಲಕರಾದ ವಂದನೀಯ ಫಾದರ್ ವಿಕ್ಟರ್ ಡಿ’ಸೋಜ, ಮುಖ್ಯೋಪಾಧ್ಯಾಯಿನಿ ಸಿ.ಬಿನೋಮರವರು ಗೌರವಿಸಿದರು. ಶಾಲಾ ಶಿಕ್ಷಕರಾದ ಭಾನುಪ್ರಕಾಶ್, ಶ್ರೀಮತಿ ಅನಿತಾ ಮಸ್ಕರೇನಸ್, ಶ್ರೀಮತಿ ಮರಿಯ ಕ್ರಾಸ್ತರವರು ತರಬೇತಿಯನ್ನು ನೀಡಿರುತ್ತಾರೆ.