ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಹುಡುಗರ ತಂಡ ಚಾಂಪಿಯನ್

0

 

ಸ.ಪ.ಪೂ ಕಾಲೇಜು ಪಂಜ ಇಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋ ರಿಯಲ್ ಪಪೂ ಕಾಲೇಜಿನ ಹುಡುಗರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.


ತಂಡದಲ್ಲಿ ಮನು ಶ್ರೀನಿವಾಸ್ ನಾಯ್ಕ್ ದ್ವಿ. ಕಲಾ ವಿಭಾಗ (ನಾಯಕ ), ಆದಿತ್ಯ ಶಿವಕುಮಾರ್ ಚಲಿಯಾರ್ ದ್ವಿ. ಕಲಾ ವಿಭಾಗ , ಪ್ರಥಮ ಕಲಾ ವಿಭಾಗದ ಮನೋಜ್ ಎಸ್ ಆರ್ , ತುಕಾರಾಮ್ ಮಣಿಗೆನಪ್ಪ ಮೋಟೆ , ನಾಗಭೂಷಣ್ ಕುಪ್ಪಯ್ಯ ಗೊಂಡ್ , ನಾಗರಾಜ್ ನಾರಾಯಣ್ ನಾಯ್ಕ್ , ಪ್ರಥಮ ವಾಣಿಜ್ಯ ವಿಭಾಗದ ವಿವೇಕ್ ದತ್ತಾತ್ರೇಯ ನಾಯ್ಕ್, ಮಾದೇಶ್ ಬಿ ಪಿ , ಕೃಪಾಲ್ ಬಿ.ಸಿ , ಅಶ್ವಥ್ ಕೆ.ಜಿ ಹಾಗೂ ದ್ವಿತೀಯ ವಿಜ್ಞಾನ ವಿಭಾಗದ ಪ್ರತೀಕ್ ಕೆ ಎಂ , ದ್ವಿತೀಯ ವಾಣಿಜ್ಯ ವಿಭಾಗದ ಕೌಶಿಕ್ ಕೆ.ಬಿ ಭಾಗವಹಿಸಿದ್ದರು.
ಮನು ಬೆಸ್ಟ್ ರೈಡರ್ ಹಾಗೂ ಆದಿತ್ಯ ಬೆಸ್ಟ್ ಆಲ್ ರೌಂಡರ್ ಆಗಿ ಹೊರ ಹೊಮ್ಮಿದ್ದಾರೆ. ಇವರಿಗೆ ದೈ.ಶಿ. ನಿರ್ದೇಶಕ ನಾಗರಾಜ್ ನಾಯ್ಕ್ ಭಟ್ಕಳ ತರಬೇತಿ ನೀಡಿದ್ದರು. ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ,ಪ್ರಾoಶುಪಾಲರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.