ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಗೆ ಸಾಂದೀಪ್ ಶಾಲಾ ವಿದ್ಯಾರ್ಥಿಗಳಿಂದ ಸ್ವಾಗತ

0

 

1837ರ ಅಮರಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯು ಮಂಗಳೂರಿನ ಬಾವುಟ ಗುಡ್ಡದಲ್ಲಿ ಪ್ರತಿಷ್ಠಾಪನೆಗೆ ತೆರಳುವ ಸಂದರ್ಭದಲ್ಲಿ ಸುಳ್ಯದಲ್ಲಿ ಭವ್ಯ ಸ್ವಾಗತ ಕಾರ್ಯಕ್ರಮಗಳು ನಡೆಯಿತು.

ಮೆರವಣಿಗೆಯು ಸುಳ್ಯ ರಸ್ತೆಯ ಮೂಲಕ ಮಂಗಳೂರಿಗೆ ತೆರಳುವಾಗ ಸುಳ್ಯ ಎಂಬಿ ಫೌಂಡೇಶನ್ ನೇತೃತ್ವದ ಸಾಂದೀಪ್ ಶಾಲಾಯ ವಿಶೇಷ ಚೇತನ ವಿದ್ಯಾರ್ಥಿಗಳು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ, ಶಾಲಾ ಪ್ರಾಂಶುಪಾಲೆ ಹರಿಣಿ ಸದಾಶಿವ, ಹಾಗೂ ಶಾಲಾ ಶಿಕ್ಷಕ ಬಂದದವರು, ಎಮ್ ಬಿ ಫೌಂಡೇಶನ್ ಸಮಿತಿ ಸದಸ್ಯರು, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.