ಹಿಂದೂ ಧರ್ಮ ಜಗತ್ತಿಗೆ ಶ್ರೇಷ್ಠ ಜ್ಞಾನ ಭಂಡಾರ ನೀಡಿದ ಧರ್ಮ , ಶ್ರೀ ಕೃಷ್ಣ ಪರಮಾತ್ಮನ ಭಗವದ್ಗೀತೆ ಕೈಯಲ್ಲಿ ಹಿಡಿದರೆ ಧರ್ಮ ರಕ್ಷಣೆ ಸಾಧ್ಯ- ಹಾರಿಕಾ ಮಂಜುನಾಥ

0

ಸುಳ್ಯ ಮೊಸರು ಕುಡಿಕೆ ಉತ್ಸವದಲ್ಲಿ ಕರೆ 

“ಶ್ರೀ ಕೃಷ್ಣ ಪರಮಾತ್ಮನ ಮಹಾಭಾರತದ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಹಿಂದೂ ಧರ್ಮದ ರಕ್ಷಣೆ ಮಾಡಲು ಸಾಧ್ಯ. ಜಾತಿ ಮತ ಭೇದವೆಂಬ ವಿಷಬೀಜ ಬಿತ್ತಿ ಹಿಂದೂ ಧರ್ಮವನ್ನು ಹೊಡೆದಾಳುವ ನೀತಿಯ ವಿರುದ್ದ ಧ್ವನಿ ಎತ್ತಿ ಹಿಂದೂ ಧರ್ಮವನ್ನು ಉಳಿಸುವ ಹಾಗೂ ಒಗ್ಗೂಡಿಸುವ ಜಾಗೃತಿಗಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಂಘಟನೆ ತಲೆ ಎತ್ತಿದೆ. ಶ್ರೀ ಕೃಷ್ಣ ಪರಮಾತ್ಮನ ಸಂದೇಶದಂತೆ ಸಂಘ ಶಕ್ತಿ ಯುಗೇ ಯುಗೇ ಎಂಬ ಧ್ಯೇಯ ಮಂತ್ರದಡಿ ಸಂಘಟನೆ ತನ್ನ ಕಾಯಕದಲ್ಲಿ ತೊಡಗಿದೆ. ಹಿಂದೂ ಧರ್ಮದಲ್ಲಿ ಇರುವ ಜಾತಿ ಸಂಕೋಲೆಯನ್ನು ಕಿತ್ತು ಎಸೆದು ಹಿಂದೂ ಬಾಂಧವರು ಸಂಘಟಿತರಾಗಬೇಕು” ಎಂದು ಸುಳ್ಯದಲ್ಲಿ ಆ.೨೯ ರಂದು ನಡೆದ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆಯ “ಸ್ವಾತಂತ್ರ್ಯ ವೀರ ಯೋಧ ವಿನಾಯಕ ದಾಮೋದರ ಸಾವರ್ಕರ್” ವೇದಿಕೆಯಲ್ಲಿ ಬಾಲವಾಗ್ಮಿ ಕು.ಹಾರಿಕಾ ಮಂಜುನಾಥರವರು ಕರೆ ನೀಡಿದರು.

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಆಯೋಜಿಸಲ್ಪಟ್ಟ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಮತೀಯ ಶಕ್ತಿಗಳು ಹಿಂದೂಗಳ ಮೇಲೆ ಆಕ್ರಮಣ, ಹತ್ಯೆಗಳಂತಹ ದುಷ್ಕೃತ್ಯಕ್ಕೆ ಮುಂದಾಗಿದ್ದಾರೆ. ಮುಂದೊಂದು ದಿನ ಭಾರತ ದೇಶವನ್ನು ಆಕ್ರಮಿಸಿ ಮತ್ತೆ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುವ ಷಡ್ಯಂತ್ರಕ್ಕೆ ಹಿಂದೂಗಳನ್ನು ಜಿಹಾದಿ ಹೆಸರಿನಲ್ಲಿ ಮತಾಂತರ ಮಾಡುತ್ತಿದ್ದಾರೆ. ಹಿಂದೂಗಳಾದ ನಾವು ಜಾಗೃತರಾಗಬೇಕು. ನಮ್ಮ ವ್ಯಾಪಾರ ವ್ಯವಹಾರ ನಮ್ಮವರ ಜತೆ ಮಾಡಬೇಕು.ಒಬ್ಬ ಹಿಂದೂ ವ್ಯಾಪಾರಿಯೊಂದಿಗೆ ವ್ಯವಹಾರ ಮಾಡಿದಾಗ ಅದರಿಂದ ಅವನಿಗಾಗುವ ಲಾಭಾಂಶದಲ್ಲಿ ದೇವಸ್ಥಾನದ ಹುಂಡಿಗೆ ಬೀಳುವುದು. ಅದೇ ಅನ್ಯ ಮತೀಯರೊಂದಿಗೆ ವ್ಯವಹರಿಸಿದಾಗ ಅದು ಜಿಹಾದಿಗಳ ಕೈ ಸೇರುವುದು. ನಮ್ಮ ಮುಂದಿನ ವ್ಯವಹಾರಗಳು ದೇವ ಮಂದಿರದಲ್ಲಿ ತೆಂಗಿನಕಾಯಿ ಒಡೆಯುವವರೊಂದಿಗೆ ಇರಲಿ. ನಮ್ಮ ಆರಾಧನಾ ಕೇಂದ್ರ, ಮಠ ಮಂದಿರಗಳಿಗೆ ಕಲ್ಲು ಹೊಡೆಯುವವರೊಂದಿಗೆ ಬೇಡ.

ಹಿಂದೂ ಧರ್ಮದ ಮೇಲೆ ಇತಿಹಾಸದಲ್ಲಿ ನಿರಂತರವಾಗಿ ಬೇರೆ ಬೇರೆ ರಾಜರುಗಳಿಂದ ಅದೆಷ್ಟೋ ಬಾರಿ ದಾಳಿ ನಡೆದರೂ ಹಿಂದೂ ಸಾಮ್ರಾಜ್ಯ ಅಳಿಯದೆ ಉಳಿದಿದೆ. ಶ್ರೇಷ್ಠ ಜ್ಞಾನ ಭಂಡಾರ ಜಗತ್ತಿಗೆ ನೀಡಿದ ಧರ್ಮ ಹಿಂದೂ ಧರ್ಮ. ನಮ್ಮ ಮುಂದಿನ ಪೀಳಿಗೆಗೆ ಧರ್ಮದ ಅರಿವು ಮತ್ತು ಸಂಸ್ಕಾರವನ್ನು ನೀಡುವ ಕೆಲಸ ಮಾತೆಯರಿಂದ ಆಗಬೇಕು. ಅನ್ಯ ಧರ್ಮದವರಿಗೆ ಬೇರೆ ಬೇರೆ ಸಾಕಷ್ಟು ದೇಶಗಳಿವೆ. ಅಸಂಖ್ಯಾತರಾಗಿರುವ ಹಿಂದೂ ಧರ್ಮದವರಾದ ನಮಗೆ ಇರುವುದೊಂದೆ ದೇಶ ಅದು ಸನಾತನ ಹಿಂದೂ ರಾಷ್ಟ್ರ ಭಾರತ. ಕ್ರಾಂತಿಕಾರಿಗಳ ಕಾರ್ಖಾನೆ ,ಕೃತಿಗಳ ಕ್ರಾಂತಿಯ ಹರಿಕಾರ ಸ್ವಾತಂತ್ರ್ಯ ವೀರ ಯೋಧ ಸಾವರ್ಕರ್ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ . ಅಜ್ಞಾನದಿಂದ ಮಾತನಾಡುವ ಅವರಿಗೆ ಕಾಲವೇ ಉತ್ತರಿಸಲಿದೆ. ಜಾತಿ, ಮತ, ಪಂಥ ಎಂಬ ವಿಭಜನೆಯನ್ನು ಬಿಟ್ಟು ಒಗ್ಗಟ್ಟಾಗಿ ಮತ್ತೆ ಹಿಂದೂಗಳ ನೈಜ ಸ್ವರೂಪವನ್ನು ತೋರಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಧರ್ಮದ ಜಾಗೃತಿಗಾಗಿ ಪ್ರತಿಯೊಬ್ಬ ಹಿಂದೂ ಬಾಂಧವರು ಭಗವದ್ಗೀತೆಯನ್ನು ಅವಲಂಬಿಸಬೇಕು ಎಂದು ಅವರು ಹೇಳಿದರು.


ಸಮಾರಂಭದ ಅಧ್ಯಕ್ಷತೆಯನ್ನು ಉತ್ಸವ ಸಮಿತಿ ಅಧ್ಯಕ್ಷ ಹರೀಶ್ ರೈ ಉಬರಡ್ಕ ವಹಿಸಿದ್ದರು. ವೇದಿಕೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್, ಮಂಗಳೂರು ವಿಭಾಗದ ವಿ.ಹೆಚ್.ಪಿ.ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಬಜರಂಗದಳ ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲು, ವಿ.ಹೆಚ್.ಪಿ.ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಸುಳ್ಯ ಐಡಿಯಲ್ ಅಟೋ ವರ್ಕ್ಸ್ ಮಾಲಕ ಭಾಸ್ಕರ ಗೌಡ ,ವಿ.ಹೆಚ್.ಪಿ.ಅಧ್ಯಕ್ಷ ಸೋಮಶೇಖರ ಪೈಕ, ಉತ್ಸವ ಸಮಿತಿ ಕಾರ್ಯದರ್ಶಿ ಪ್ರಕಾಶ್ ಯಾದವ್, ಕೋಶಾಧಿಕಾರಿ ರಂಜಿತ್ ಕುಮಾರ್ ಪಿ, ಬಜರಂಗದಳ ಸಂಯೋಜಕ್ ಸಂದೀಪ್ ವಳಲಂಬೆ, ದುರ್ಗಾವಾಹಿನಿ ಸಂಯೋಜಕಿ ನಮಿತ ಪ್ರವೀಣ್ ರಾವ್ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ರವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ಬಾಲವಾಗ್ಮಿ ಕು.ಹಾರಿಕಾ ಮಂಜುನಾಥ ರವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಕು.ಅಭಿಜ್ಞಾ ವೈಯುಕ್ತಿಕ ಗೀತೆ ಹಾಡಿದರು.

ಸಂದೀಪ್ ವಳಲಂಬೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಪ್ರಕಾಶ್ ಯಾದವ್ ವಂದಿಸಿದರು. ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ರವರು ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸಹಕರಿಸಿದರು. ಸಾವಿರಾರು ಮಂದಿ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು. ಆಗಮಿಸಿದ ಎಲ್ಲರಿಗೂ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸುಳ್ಯ ಸಾರ್ವಜನಿಕ ದೇವತಾರಾಧನಾ ಗಣೇಶೋತ್ಸವ ಸಮಿತಿ ವತಿಯಿಂದ ವೇದಿಕೆ ಮತ್ತು ಪೆಂಡಾಲ್ ನ್ನು ನಿರ್ಮಿಸಿಕೊಡಲಾಗಿತ್ತು.