ಜಾಲ್ಸೂರು: ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟಗಳ ಉದ್ಘಾಟನೆ – ಪದಗ್ರಹಣ

0

 

ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಜಾಲ್ಸೂರು ವಲಯ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಜಾಲ್ಸೂರು ಗೇಟ್ , ಜಾಲ್ಸೂರು, ಬೊಳುಬೈಲು, ಅಂಜನಾದ್ರಿ, ಕನಕಮಜಲು, ಬೆಳ್ಳಿಪ್ಪಾಡಿ, ಅಜ್ಜಾವರ, ಅಡ್ಪಂಗಾಯ ಹಾಗೂ ಊರವರ ಸಹಕಾರದೊಂದಿಗೆ ಪರಮಪೂಜ್ಯ ರಾಜರ್ಷಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ ಹಾಗೂ ಒಕ್ಕೂಟಗಳ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭವು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಕಾರ್ತಿಕೇಯ ಸಭಾಭವನದಲ್ಲಿ ಆ.28ರಂದು ಜರುಗಿತು.

 

ಕಾರ್ಯಕ್ರಮದಲ್ಲಿ ಜಾಲ್ಸೂರು ವಲಯದ ಅಧ್ಯಕ್ಷ ಮುರಳೀಧರನ್ ಕೆಮನಬಳ್ಳಿ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್.ಎ. ರಾಮಚಂದ್ರ ಅವರು ಉದ್ಘಾಟಿಸಿ, ಶುಭಹಾರೈಸಿದರು.


ಜವಾಬ್ದಾರಿ ಹಸ್ತಾಂತರವನ್ನು ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಅವರು ನೆರವೇರಿಸಿದರು.


ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ವಿನೋಬನಗರ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹಾಗೂ ಜನಜಾಗೃತಿ ವೇದಿಕೆಯ ಜಾಲ್ಸೂರು ವಲಯಾಧ್ಯಕ್ಷ
ಜಯರಾಮ ರೈ ಜಾಲ್ಸೂರು,
ಅಡ್ಕಾರು ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ಜನಜಾಗೃತಿ ವೇದಿಕೆಯ ಸದಸ್ಯ ಜಯರಾಮ ಗೌಡ ಬೆಳ್ಳಿಪಾಡಿ ಉಪಸ್ಥಿತರಿದ್ದರು.
ವಲಯದ ಮೇಲ್ವಿಚಾರಕ ತೀರ್ಥರಾಮ, ಶ್ರೀಮತಿ ವಿಶಾಲ ಹಾಗೂ ಸೇವಾಪ್ರತಿನಿಧಿಗಳಾದ ಬಾಲಕೃಷ್ಣ ಕಾನ, ವೀಣಾ, ಅನುರಾಧ., ಲೋಲಾಕ್ಷಿ, ರಜನಿ ಶುಶ್ಮಿತಾ, ಸಚಿನ್,   ದೀಪಕ್ ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ 10ನೇ ತರಗತಿ ಯಲ್ಲಿ 600ಕ್ಕಿಂತ ಹೆಚ್ಚು ಅಂಕ ಪಡೆದ 2 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಿಂದ್ಯ ಕಾಟೂರ್, ತನುಷ್ ಜೆ. ಅಡ್ಕಾರು, ಹಾಗೂ ಚಿತ್ರಕಲೆ ಯಲ್ಲಿ ಶಶಿ ಅಡ್ಕಾರು ಅವರನ್ನು ಗುರುತಿಸಿ ಸನ್ಮಾನಿಲಾಯಿತು.
ಶ್ರೀಮತಿ ನಿವೇದಿತಾ ಅವರು ಪಾರ್ಥಸಿ, ಮೇಲ್ವಿಚಾರಕರಾದ ವಿಶಾಲಾಕ್ಷಿ ಸ್ವಾಗತಿಸಿದರು. ವಲಯದ ವರದಿಯನ್ನು ಸೇವಾಪ್ರತಿನಿಧಿ ಲೋಲಾಕ್ಷಿ ಮಂಡಿಸಿ ಪದ್ಮನಾಭ ನೆಕ್ರಾಜೆ ವಂದಿಸಿದರು. ಜಯಪ್ರಕಾಶ್ ಪೇರಲು ಅವರು ಕಾರ್ಯಕ್ರಮ ನಿರೂಪಿಸಿದರು.