ಸುಳ್ಯ ಮೊಸರು ಕುಡಿಕೆ ಉತ್ಸವ

0

 ಅಟ್ಟಿ ಮಡಿಕೆ ಸ್ಪರ್ಧೆಯಲ್ಲಿ ಉಬರಡ್ಕ – ಪ್ರಥಮ, ಜಯನಗರ – ದ್ವಿತೀಯ, ಗುಂಡ್ಯ- ತೃತೀಯ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ ನಡೆದ ರೋಮಾಂಚನಕಾರಿ ಅಟ್ಟಿ ಮಡಿಕೆ ಒಡೆಯುವ ಯುವಕರ ಸಾಹಸಮಯ ಸ್ಪರ್ಧೆಯಲ್ಲಿ ಉಬರಡ್ಕ
ಹಿಂದೂ ಜಾಗರಣ ವೇದಿಕೆ ಪ್ರಥಮ, ವಿಕ್ರಮ ಯುವಕ ಮಂಡಲ ಜಯನಗರ ದ್ವಿತೀಯ,
ಜನನಿ ಫ್ರೆಂಡ್ಸ್ ಗುಂಡ್ಯ- ಆಲೆಟ್ಟಿ ತೃತೀಯ ಸ್ಥಾನವನ್ನು ಗಳಿಸಿಕೊಂಡಿರುತ್ತಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಗಳು
ಅನ್ನಪೂರ್ಣ ಪವರ್ ಬಾಯ್ಸ್,
ಹೈ ಟೋರ್ಕ್ ಮೋಟೋ ಕ್ರಿವ್ ಸುಳ್ಯ,
ಶ್ರೀ ರಾಮ್ ಫ್ರೆಂಡ್ಸ್ ಪೇರಾಲ್,
ಓಂ ಫ್ರೆಂಡ್ಸ್ ಅಜ್ಜಾವರ,
ಟೀಮ್ ವೀರ ಸಾವರ್ಕರ್ ಸುಳ್ಯ,
ಶಾಸ್ತಾವು ಯುವಕ ಮಂಡಲ ರೆಂಜಾಳ,
ಮಿತ್ರ ಬಳಗ ಕಾಯರ್ತೋಡಿ,
ಜ್ಯೋತಿಷ್ ಬಳಗ ಕಲ್ಲಪಳ್ಳಿ,
ಯುವ ಕೇಸರಿ ಬಳಗ ಮುಳ್ಯ ಅಟ್ಲೂರು,
ಅಕ್ಷಯ ಯುವಕ ಮಂಡಲ ನೆಟ್ಟಾರು,
ಅಮರ ಹಿಂದೂ ಸೇನೆ ಚೊಕ್ಕಾಡಿ,
ಬ್ರಿಡ್ಜ್ ಬಾಯ್ಸ್ ಸುಳ್ಯ,
ಅಮರ ವೀರ ಗುರು ಕೃಷ್ಣ ಮರ್ಕಂಜ,
ಚಿರ್ಪು ಗುಡ್ಡೆ ಜಟ್ಟಿಪಳ್ಳ,
ಬಜರಂಗದಳ ಬೆಳ್ಳಾರೆ,
ಹಿಂದೂ ಜಾಗರಣ ವೇದಿಕೆ ದೊಡ್ಡೇರಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರೋತ್ಸಾಹ ಬಹುಮಾನ ನೀಡಿ ಅಭಿನಂದಿಸಲಾಯಿತು. ಅಟ್ಟಿ ಮಡಿಕೆಯ ನಿರ್ಮಾಣದ ಪ್ರತಿ ಚಪ್ಪರಕ್ಕೆ ಹಿಂದುತ್ವಕ್ಕಾಗಿ ಮಡಿದ ವೀರ ಯೋಧರ ಹಾಗೂ ಹುತಾತ್ಮ ಹಿಂದೂ ಕಾರ್ಯಕರ್ತರುಗಳಾದ ಸ್ವಾಮಿ ವಿವೇಕಾನಂದ, ರಾಣಿ ಅಬ್ಬಕ್ಕ, ಚಂದ್ರಶೇಖರ ಅಜಾದ್,ವಸುದೇವ ಬಲವಂತ ಪಡಕೆ, ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜ್,‌ ಸುಖದೇವ್, ರಾಣಾ ಪ್ರತಾಪ ಸಿಂಹ, ಕಿತ್ತೂರು ರಾಣಿ ಚೆನ್ನಮ್ಮ, ಬಿಪಿನ್ ಚಂದ್ರಪಾಲ್,‌ಮಂಗಲ್ ಪಾಂಡೆ, ಮದನ್ ಲಾಲ್ ದಿಂಗ್ರಾ, ಸುಭಾಷ್ ಚಂದ್ರ ಬೋಸ್, ಡಾ.ಬಿ.ಆರ್.ಅಂಬೆಡ್ಕರ್,ಬಾಲಗಂಗಾಧರನಾಥ ತಿಲಕ,ಭಗತ್ ಸಿಂಗ್,ರಾಮ್ ಕೊಟ್ಟಾರಿ, ಶರದ್ ಕೊಟ್ಟಾರಿ, ವೀರ ಸಾವರ್ಕರ್ ಇವರುಗಳ ಹೆಸರನ್ನು ಇಟ್ಟಿರುವುದು ವಿಶೇಷವಾಗಿತ್ತು.