ನಿವೃತ್ತ ಎಎಸ್‌ಐ ಭಾಸ್ಕರ್‌ರಿಂದ ಸುಳ್ಯದಲ್ಲಿ ಔತಣ ಕೂಟ ಹಿತೈಷಿ ಮಿತ್ರರು, ಬಂಧುಗಳಿಂದ ಭಾಸ್ಕರ್‌ರಿಗೆ ಗೌರವ

0

p>

 

 

೩೭ ವರ್ಷ ಕಾಲ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಎ.ಎಸ್.ಐ. ಆಗಿ ಕಳೆದ ತಿಂಗಳು ನಿವೃತ್ತರಾಗಿರುವ ಭಾಸ್ಕರ ಅಡ್ಕಾರ್‌ರಿಂದ ಸಹೋದ್ಯೋಗಿಗಳಿಗೆ, ಹಿತೈಷಿ ಮಿತ್ರರಿಗೆ, ಬಂಧುಗಳಿಗೆ ಔತನ ಕೂಟವನ್ನು ಆ.೨೮ರಂದು ಸುಳ್ಯದ ಗಿರಿದರ್ಶಿನಿ ಕಲಾಮಂದಿರದಲ್ಲಿ ಆಯೋಜಿಸಿದ್ದರು.
ಕಡಬ ಎಸ್.ಐ. ಆಂಜನೆಯ ರೆಡ್ಡಿಯವರು ಮುಖ್ಯ ಅತಿಥಿಗಳಾಗಿ ಆಗಿಸಿ, ಭಾಸ್ಕರ್‌ರ ಕರ್ತವ್ಯ ನಿಷ್ಠೆಯ ಕುರಿತು ವಿವರ ನೀಡಿದರು. ವೇದಿಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ವೀಣಾ ಎಂ.ಟಿ., ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಕ ಶಿಕ್ಷಣಾಧಿಕಾರಿ ಲಕ್ಷ್ಮೀಶ್ ರೈ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ, ಪೈಲಾರು ಅಮರ ಸಂಘಟನೆಯ ರಜನಿಕಾಂತ್, ಕೃಷಿಕ ವಿನೋದ್ ಲಸ್ರಾದೋ, ಶಿಕ್ಷಣ ಸಂಯೋಜಕ ಚಂದ್ರಶೇಖರ್, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕ ಡಾ| ಸುಂದರ ಕೇನಾಜೆ, ಶಿಕ್ಷಕಿ ಸವಿತಾ ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಮನೊರಂಜನಾ ಸ್ಪರ್ಧೆಗಳನ್ನು ಆಯೋಜಿಸಿ, ಗೆದ್ದವರಿಗೆ ಬಹುಮಾನ ನೀಡಲಾಯಿತು. ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು.
ಸಭೆಗೆ ಆಗಮಿಸಿದ ಎಲ್ಲರೂ ಭಾಸ್ಕರ್ ಅಡ್ಕಾರು ಹಾಗು ಶಿಕ್ಷಕಿ ವಿಜಯಲಕ್ಷ್ಮೀಯವರು ಗೌರವಿಸಿ, ಶುಭಕೋರಿದರು.

LEAVE A REPLY

Please enter your comment!
Please enter your name here