ಭಾರತದ ಸ್ವಾತಂತ್ರ್ಯ ಧ್ವಜವನ್ನು ಹಿಡಿದು ಹೋರಾಟ ಮಾಡುವ ನೈತಿಕತೆ ಇರುವುದು ಕಾಂಗ್ರೆಸ್ ಗೆ ಮಾತ್ರ

0

ಸ್ವಾತಂತ್ರ್ಯ ನಡಿಗೆ ಸಮಾರೋಪ ಸಮಾರಂಭದಲ್ಲಿ ಸುಧೀರ್ ಕುಮಾರ್ ಮುರೊಳ್ಳಿ

ಅಹಿಂಸೆ, ಸತ್ಯಾಗ್ರಹ, ಸರ್ವಜನಾಂಗದ ಚಳವಳಿಯನ್ನು ಈ ದೇಶದಲ್ಲಿ ಗಾಂಧೀಜಿಯಾದಿಯಾಗಿ ಹಲವು ನಾಯಕರು ಹಾಗೂ ಕಾಂಗ್ರೆಸ್ ಕೈಗೊಂಡಿರುವುದರಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ದೇಶದ ಸ್ವಾತಂತ್ರ್ಯದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಮಹತ್ವದ್ದು. ಇಂದು ಭಾರತದ ಸ್ವಾತಂತ್ರ್ಯದ ಧ್ವಜವನ್ನು ಹಿಡಿದು ಹೋರಾಟ ಮಾಡುವ ನೈತಿಕತೆ ಇದ್ದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ದೇಶದ ಅಧಿಕಾರ ನಡೆಸುವವರಿಗೆ ಸಂವಿಧಾನವೇ ಪರಮ ಶ್ರೇಷ್ಠವಾಗಬೇಕು. ಸಂವಿಧಾನದ ಅನುಷ್ಠಾನಕ್ಕೆ ಪರಮ ಪ್ರಾಧಾನ್ಯ ನೀಡಬೇಕು. ಕಾಂಗ್ರೆಸ್ ನೇತೃತ್ವದಲ್ಲಿ ಚಳುವಳಿ ನಡೆಸಿ ಸ್ವಾತಂತ್ರ್ಯ ಗಳಿಸಿ, ಆ ಸ್ವಾತಂತ್ಯ ಎಲ್ಲರಿಗೂ ದೊರೆಯಬೇಕು ಎಂಬ ನೆಲೆಯಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವವನ್ನೂ, ಸಂವಿಧಾನವನ್ನೂ ಜಾರಿ ಮಾಡಲಾಗಿದೆ. ನಮ್ಮ ಸ್ವಾತಂತ್ರ್ಯವನ್ನು ಉಳಿಸಬೇಕಾದ, ಸಂವಿಧಾನವನ್ನು ಉಳಿಸಬೇಕಾದ ಅನಿವಾರ್ಯತೆ ಇಂದು ಇದೆ ಎಂದು ಅವರು ಹೇಳಿದರು.

ಸಾವರ್ಕರ್ ಬ್ಯಾನರನ್ನು ಕಾಂಗ್ರೆಸ್ ನ ಯಾರೂ ಕಿತ್ತೆಸೆಯುವ ಕೆಲಸ ಮಾಡಬಾರದು. ಯಾಕೆಂದರೆ ಬಿಜೆಪಿಗರಿಗೆ ಅದೇ ಬೇಕಾಗಿರುವುದು. ಆ ಮೂಲಕ ಜನರಿಗೆ ಅವರ ಬಗ್ಗೆ ಮತ್ತಷ್ಟು ತಿಳಿಸುವುದು ಎಂದ ಅವರು ಸಾವರ್ಕರ್ ಈ ದೇಶದ ಸ್ವಾತಂತ್ರ್ಯ ಕ್ಕಾಗಿ ಒಂದು ಹಂತದಲ್ಲಿ ಹೋರಾಡಿದ್ದು ಸತ್ಯ. ಆದರೆ ಅವರ ಹೋರಾಟ ಇಡೀ ಭಾರತದ ಹೋರಾಟ ಆಗಲು ಸಾಧ್ಯವೇ ಇಲ್ಲ. ಅವರು ಜೈಲಿಗೆ ಹೋದುದ್ದು ಹೌದು, ಶಿಕ್ಷೆ ಆದುದು ಹೌದು. ಆದರೆ ಇದೇ ಸಂದರ್ಭ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ 6 ಬಾರಿ ಕ್ಷಮಾಪನಾ ಪತ್ರ ಬರೆದದ್ದು ಕೂಡಾ ಇದೇ ಸಾವರ್ಕರ್ ಇದೆಲ್ಲಾ ಗೊತ್ತಿಲ್ಲವೇ? ಎಂದು ಅವರು ಹೇಳಿದರು.

ಈ ದೇಶದ ವಿಭಜನೆಗೆ ನೆಹರೂ ಕಾರಣ ಎಂದು ಇಲ್ಲಿಯ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳುತ್ತಾರೆ. ಭಾರತ ವಿಭಜನೆಗೆ ಕಾರಣವಾಗಿದ್ದು 1931 ರ ಮಹಾಸಭಾದ ಜನರಲ್ ಬಾಡಿ ಸಭೆಯಲ್ಲಿ ದ್ವಿರಾಷ್ಟ್ರ ಸಿದ್ದಾಂತವನ್ನು ಮುಸ್ಲಿಂ ಲೀಗ್ ಹಾಗೂ ಮಹಾಸಭಾದವರು ಸಾವರ್ಕರ್ ನೇತೃತ್ವದಲ್ಲಿ ಮಂಡಿಸ್ತಾರೆ ಇದಕ್ಕೆ ದಾಖಲೆ ಇದೆ. ಆದ್ದರಿಂದ ಭಾರತ ವಿಭಜನೆಗೆ ಎರಡು ಮತೀಯವಾದ ಕಾರಣವೇ ಹೊರತು ಕಾಂಗ್ರೆಸ್ ಅಲ್ಲ ಎಂದು ಹೇಳಿದರು.

ಜನಸಾಮಾನ್ಯರಿಗೆ ಅಗತ್ಯವಿದ್ದ ಗ್ಯಾಸ್ ಸಿಲಿಂಡರ್ ನ್ನು ಕಡಿಮೆ ಬೆಲೆಗೆ ಕೊಟ್ಟದ್ದು‌ ಕಾಂಗ್ರೆಸ್. ಆದರೆ ಅದರ ಬೆಲೆ 1000 ಕ್ಕೆ ದಾಟಿಸಿದ್ದು ಬಿಜೆಪಿ ಸರಕಾರ ಅಲ್ಲವೇ ಎಂದು ಹೇಳಿದ ಅವರು ಪೆಟ್ರೋಲ್ ಬೆಲೆ 100 ರ ಗಡಿ ದಾಟಿಸಿದ್ದು ಬಿಜೆಪಿ ಕಾಂಗ್ರೆಸ್ 70 ವರ್ಷದಲ್ಲಿ ಮಾಡದ್ದನ್ನು ಬಿಜೆಪಿ 8 ವರ್ಷದಲ್ಲಿ ಮಾಡಿದೆ ಎಂದು ಹೇಳಿದರು.

ಆ.30 ರಂದು ಬೆಳಗ್ಗೆ 10.45 ಕ್ಕೆ ಜಾಲ್ಸೂರಿನಿಂದ ಆರಂಭಗೊಂಡ ನಡಿಗೆ ಅಪರಾಹ್ನ 2.30 ರ‌ ಸುಮಾರಿಗೆ ಸುಳ್ಯ ತಲುಪಿತ್ತು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಸಂಯೋಜಕರಾದ ಜಿ.ಕೃಷ್ಣಪ್ಪ, ಹೆಚ್‌.ಎಂ.ನಂದಕುಮಾರ್‌,
ಕಾಂಗ್ರೆಸ್‌ ಮುಖಂಡರಾದ ನಿತ್ಯಾನಂದ ಮುಂಡೋಡಿ, ಕಾವು ಹೇಮನಾಥ ಶೆಟ್ಟಿ, ಎನ್.ಜಯಪ್ರಕಾಶ್ ರೈ, ಭರತ್‌ ಮುಂಡೋಡಿ, ಟಿ.ಎಂ.ಶಾಹೀದ್ ತೆಕ್ಕಿಲ್, ಎಂ. ವೆಂಕಪ್ಪ ಗೌಡ, ಡಾ.ಬಿ.ರಘು, ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಬ್ಲಾಕ್ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ಕೋಲ್ಟಾ‌, ರಾಜೀವಿ ಆರ್ ರೈ, ದಿವ್ಯ ಪ್ರಭಾ ಚಿಲ್ಯಡ್ಕ ಪಿ.ಎಸ್.ಗಂಗಾಧರ, ಎಸ್.ಸಂಶುದ್ದೀನ್, ಬಾಪೂ ಸಾಹೇಬ್, ಕೆ.ಗೋಕುಲ್‌ದಾಸ್, ಬೆಟ್ಟ ರಾಜರಾಮ್ ಭಟ್, ಸೋಮಶೇಖರ ಕೊಯಿಂಗಾಜೆ, ಮಿತ್ರದೇವ ಮಡಪ್ಪಾಡಿ, ಸುರೇಶ್ ಎಂ.ಎಚ್, ಮಹಮ್ಮದ್‌ ಕುಂಞ ಗೂನಡ್ಕ, ಹಸೈನಾ‌ರ್ ಹಾಜಿ ಗೋರಡ್ಕ, ಅಶೋಕ್ ಚೂಂತಾರು, ವಹೀದಾ ಇಸ್ಮಾಯಿಲ್, ಲೀಲಾ ಮನಮೋಹನ್, ಸುಧೀರ್ ರೈ, ಮೇನಾಲ, ಸದಾನಂದ ಮಾವಜಿ, ಕೆ.ಎಂ.ಮುಸ್ತಫಾ, ಎಸ್.ಕೆ.ಹನೀಫ್, ಚೆನ್ನಕೇಶವ ಜಾಲ್ಲೂರು, ಇಸ್ಮಾಯಿಲ್ ಪಡ್ಪಿನಂಗಡಿ, ಅಬೂಸಾಲಿ ಗೂನಡ್ಕ ರಹೀಂ ಬೀಜದಕಟ್ಟೆ, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ಶಾಫಿ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ, ಸಚಿನ್‌ರಾಜ್‌ ಶೆಟ್ಟಿ, ಕಳಂಜ ವಿಶ್ವನಾಥ ರೈ, ಜಯಪ್ರಕಾಶ್ ನೆಕ್ರಪ್ಪಾಡಿ, ಅನಿಲ್ ರೈ ಬೆಳ್ಳಾರೆ, ಶಶಿಧರ ಎಂ.ಜೆ, ಶಾಹುಲ್‌ ಹಮೀದ್‌ ಕುತ್ತಮೊಟ್ಟೆ, ಮೂಸಾ ಕುಂಞ ಪೈಂಬೆಚ್ಚಾಲ್, ಶಾಹಿದ್ ಪಾರೆ, ಆರ್.ಕೆ.ಮಹಮ್ಮದ್,ಶೌವಾದ್ ಗೂನಡ್ಕ, ಅನುಸೂಯ, ಶಕುಂತಳಾ ಬೆಳ್ಳಾರೆ, ಸುಜಯಾ ಕೃಷ್ಣ ಹಾಜಿರಾ ಕಲ್ಮಡ್ಕ ಜೂಲಿಯಾ ಕ್ರಾಸ್ತಾ, ತೇಜಕುಮಾರ್ ಬಡ್ಡಡ್ಕ ಆನಂದ ಬೆಳ್ಳಾರೆ, ಎನ್.ಎಸ್.ಡಿ ವಿಠಲದಾಸ್, ರಾಜು ಪಂಡಿತ್‌, ನಂದರಾಜ ಸಂಕೇಶ, ಟಿ.ಐ.ಲೂಕಾಸ್, ಮಹೇಶ್ ಕುಮಾರ್ ಕರಿಕ್ಕಳ, ಕೀರ್ತನ್ ಕಡೆಪಾಲ, ಚಂದ್ರಲಿಂಗಂ, ಉಬೈದ್ ಗೂನಡ್ಕ ಮಜೀದ್‌ ಜಾಲ್ಕೂರು, ಅನಿಲ್ ಬಳ್ಳಡ್ಕ ಕಾಂತಿ ಬಿ.ಎಸ್, ಯಮುನಾ ಬಿ.ಎಸ್‌., ಪರಶುರಾಮ ಚಿಲ್ಲಡ್ಕ, ದಿನೇಶ್ ಅಂಬೆಕಲ್ಲು, ದಿನೇಶ್‌ ಸರಸ್ವತಿ, ಮಹಲ್‌, ಮೋಹಿತ್ ಹರ್ಲಡ್ಕ, ಪಿ.ಎ.ಮಹಮ್ಮದ್‌, ಪ್ರವೀಣಾ ಮರುವಂಜ, ರಾಹುಲ್ ಅಪ್ಪಂಗಾಯ, ಉಷಾ ಜಯರಾಮ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಪಿ.ಪಿ.ವರ್ಗೀಸ್, ಕೆ.ಪಿ. ಥಾಮಸ್, ಸರ್ವೋತ್ತಮ ಗೌಡ, ಪ್ರಸಾದ್ ರೈ ಮೇನಾಲ, ವಿಶ್ವನಾಥ ಮುಳ್ಯಮಠ, ಅತ್ಯಡ್ಕ, ರಾಹುಲ್ ಅಡ್ಪಂಗಾಯ, ಪೂರ್ಣಚಂದ್ರ ಕಣೆಮರಡ್ಕ, ರಾಘವ ಮುಳ್ಯ, ರಂಜೀತ್ ರೈ ಮೇನಾಲ, ಜಯರಾಮ ಅತ್ಯಡ್ಕ ಮತ್ತಿತರರು ಭಾಗವಹಿಸಿದ್ದರು.