ಬಾಳಿಲ: ಶಾರದೋತ್ಸವ ಬಗ್ಗೆ ಪೂರ್ವಭಾವಿ ಸಭೆ

0

ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ- ಮುಪ್ಪೇರ್ಯ ಇದರ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ. 4, 5ರಂದು ಜರಗಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ಆ. 31ರಂದು ಪಾಜಪಳ್ಳದ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ನಡೆಯಿತು.

ಸಮಿತಿಯ ಗೌರವಾಧ್ಯಕ್ಷ ಯು. ರಾಧಾಕೃಷ್ಣ ರಾವ್ ಉಡುವೆಕೋಡಿ, ಕಾರ್ಯಾಧ್ಯಕ್ಷ ಸುಧಾಕರ ರೈ ಎ.ಎಂ, ಅಧ್ಯಕ್ಷ ರೋಹಿತ್ ಚಾಕೊಟೆಡ್ಕ, ಗೌರವ ಸಲಹೆಗಾರರಾದ ಎ.ಕೆ‌. ನಾಯ್ಕ್ ಚೊಕ್ಕಾಡಿ ಅಮೆಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜೇಶ್ ಸುವರ್ಣ ಅಯ್ಯನಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ರೂಪುರೇಷೆ ಬಗ್ಗೆ ಮಾತನಾಡಿದರು. ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.