ಮಂಡೆಕೋಲಿನಲ್ಲಿ 15ನೇ ವರ್ಷದ ಗಣೇಶೋತ್ಸವ

0

ಮಂಡೆಕೋಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಇವರ ಆಶ್ರಯದಲ್ಲಿ 15ನೇ ವರ್ಷದ ಗಣೇಶೋತ್ಸವ ಆಚರಣೆಯು ಆ.31ರಂದು ಮಂಡೆಕೋಲು ಭಜನಾ ಮಂದಿರದಲ್ಲಿ ನಡೆಯುತ್ತಿದೆ.

ಬೆಳಗ್ಗೆ ಗಣಪತಿ ಹೋಮ ಹಾಗೂ ಗಣಪತಿ ಮೂರ್ತಿ ಪ್ರತಿಷ್ಠೆ. ಬಳಿಕ ಭಜನಾ ಸೇವೆ ಹಾಗೂ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪಧೆಗಳು ನಡೆಯುತ್ತಿದೆ. ಹರಿಕಥಾ ಸತ್ಸಂಗ ಭಕ್ತ ಮಾರ್ಕಂಡೇಯ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯುವುದು.

ಅಪರಾಹ್ನ ಸಭಾ ಕಾರ್ಯಕ್ರಮ ನಡೆದು ಬಹುಮಾನ ವಿತರಣೆಯಾದ ಬಳಿಕ ಗಣೇಶನ ಅದ್ದೂರಿ ಮೆರವಣಿಗೆಯೊಂದಿಗೆ ಜಲಸ್ಥಂಭನ ಮಾಡಲಾಗುವುದು ಎಂದು ಸಮಿತಿಯವರು ತಿಳಿಸಿದ್ದಾರೆ