ಬಳ್ಳಕ್ಕದಲ್ಲಿ ಶ್ರೀ ಗಣೇಶೋತ್ಸವ

0

ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಬಳ್ಳಕ್ಕ ಇದರ ಆಶ್ರಯದಲ್ಲಿ 35ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ. 31ರಂದು ಬಳ್ಳಕ್ಕ – ಹರಿಪುರ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯುತ್ತಿದೆ.

ಬೆಳಿಗ್ಗೆ ಗಣಪತಿ ಪ್ರತಿಷ್ಠೆ, ಬಳಿಕ ಊರವರಿಂದ ಭಜನಾ ಕಾರ್ಯಕ್ರಮ, ಟೀಮ್ ಟ್ಯಾಲೆಂಟ್ ಹಂಟರ್ಸ್ ಇವರಿಂದ ಕೊಳಲು ವಾದನ ನಡೆಯಿತು. ಪೂರ್ವಾಹ್ನ ರಂಗಪೂಜೆ, ಅಕ್ಷರಾಭ್ಯಾಸ, ಮಧ್ಯಾಹ್ನ ಮಹಾಮಂಗಳಾರತಿ, ಬಳಿಕ ಪ್ರಸಾದ ವಿತರಣೆ, ಭೋಜನ ನಡೆಯಲಿದೆ. ಮಧ್ಯಾಹ್ನ 1:30 ರಿಂದ ಗಯಾಪದ ಕಲಾವಿದೆರ್ ಉಬರ್ ಇವರಿಂದ ತುಳು ಹಾಸ್ಯಮಯ ನಾಟಕ ‘ಏತ್ ಪಂಡಲಾ ಆತೆ’ ನಡೆಯಲಿದೆ. ಸಂಜೆ 4:30 ರಿಂದ ಶೋಭಾ ಯಾತ್ರೆ ಮತ್ತು ಗಣೇಶನ ವಿಸರ್ಜನೆ ನಡೆಯಲಿದೆ.