ವಳಲಂಬೆಯಲ್ಲಿ 19 ನೇ ವರ್ಷದ ಗಣೇಶೋತ್ಸವ

0

ಇಂದು ಸಂಜೆ ಶೋಭಾಯಾತ್ರೆ , ಮೂರ್ತಿ ಜಲಸ್ತಂಭನ

ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಳಲಂಬೆ ಇದರ ವತಿಯಿಂದ ಆ. 31 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ನಡೆಯಿತು.

 


ಬೆಳಗ್ಗೆ ಗಣಪತಿ ಪ್ರತಿಷ್ಠೆ, ಬಳಿಕ ಸಾಮೂಹಿಕ ಗಣಪತಿ ಹೋಮ ನಡೆಯಿತು. ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವುದು ಕಾರ್ಯಕ್ರಮವು ನಡೆದಿದ್ದು
ಸಾರ್ವಜನಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆದವು. ಸಂಜೆ ವಿಸರ್ಜನೆ 3 ಗಂಟೆ ಬಳಿಕ ಶೋಭಾಯಾತ್ರೆ ಹೊರಟು ಮೂರ್ತಿ ಜಲಸ್ತಂಭನೆ ನಡೆಯಲಿದೆ.