ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ವಿಘ್ನ ನಿವಾರಕ ಗಣಪತಿ : ಸುಬ್ರಹ್ಮಣ್ಯ ಕುಳ

ಶಾಂತಿ ನೆಮ್ಮದಿಯ ಸಮಾಜ ನಿರ್ಮಾಣ ಆಗಬೇಕು : ಸಂತೋಷ್ ರೈ ಕೆ

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-2022 ಇದರ ವತಿಯಿಂದ ಜರಗುವ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.31ರಿಂದ ಸೆ.2ತನಕ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ಜರುಗಲಿದೆ.

ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆ ಉದ್ಘಾಟನೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಉದ್ಘಾಟಿಸಿ ಮಾತನಾಡಿ “ವಿಘ್ನ ನಿವಾರಕನಾದ ಮಹಾಗಣಪತಿ ದೇವರ ಅನುಮತಿ ಪಡೆದು ಎಲ್ಲಾ ಶುಭ ಕಾರ್ಯಗಳಿಗೆ ಚಾಲನೆ ನೀಡುತ್ತೇವೆ. ಗಣಪತಿ ವಿಶೇಷವಾಗಿ ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ರೂಪರೇಷೆಗಳನ್ನು ನೀಡಿದ ಜಾತ್ಯಾತೀತ ಶಕ್ತಿಯ ದೇವರು. ಗಣಪತಿ ಗುಡಿಗಳಿಲ್ಲದ ಗ್ರಾಮಗಳಿಲ್ಲ. ವಿಶೇಷವಾಗಿ ನಾವು ಎಷ್ಟೇ ಆಧುನಿಕ ವೈಜ್ಞಾನಿಕವಾಗಿ ಮುಂದುವರಿದರೂ ಇಸ್ರೋ ವಿಜ್ಞಾನಿಗಳು ಇಂದಿಗೂ ಯಾವುದೇ ಸ್ಯಾಟಲೈಟ್ ಪ್ರೊಜೆಕ್ಟ್ ಗಳನ್ನು ಲಾಂಚ್ ಮಾಡುವ ಮೊದಲು ಗಣಹೋಮ ನಡೆಸಿ ಬಲವಾದ ನಂಬಿಕೆ ಇಟ್ಟು ಕಾರ್ಯಗಳನ್ನು ನಡೆಸುತ್ತಾರೆ. .”ಎಂದು ಅವರು ಹೇಳಿದರು.
ಕ್ರೀಡಾ ಸ್ಪರ್ಧೆಯನ್ನು ಉಪವಲಯ ಅರಣ್ಯಾಧಿಕಾರಿ ಸಂತೋಷ್ ರೈ ಕೆ ಉದ್ಘಾಟಿಸಿ ಆರಾಧನೆಯೊಂದಿಗೆ ನಮ್ಮಿಂದ ದೇವರಿಗೆ ಸಮರ್ಪಣೆ ಆಗಿರುವುದು ಮುಖ್ಯ.ಈ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಆಗ ಬೇಕು. ಸ್ವಾಂತಂತ್ರ್ಯ ಹೋರಾಟಕ್ಕಾಗಿ ಧರ್ಮ ಜಾಗೃತಿ ಮೂಲಕ ದೇಶ ಕಟ್ಟುವ ಕೆಲಸಕ್ಕಾಗಿ ಗಣೇಶೋತ್ಸವನ್ನು ಬಾಲಗಂಗಾಧರ ತಿಲಕ್ ರವರು ಮಾಡಿದ್ದಾರೆ. ಎಂದು ಅವರು ಹೇಳಿದರು.


ಸಭಾಧ್ಯಕ್ಷತೆಯನ್ನು ಉತ್ಸವ ಸಮಿತಿಯ ಅಧ್ಯಕ್ಷ ಜಯರಾಮ ಕಲ್ಲಾಜೆ ವಹಿಸಿದ್ದರು. ಆರಾಧನಾ ಸಮಿತಿ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ, ಉತ್ಸವ ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪುರಂದರ ಶೆಟ್ಟಿ ನಾಗತೀರ್ಥ ಪ್ರಾರ್ಥಿಸಿದರು.ವಾಸುದೇವ ಮೇಲ್ಪಾಡಿ ಸ್ವಾಗತಿಸಿದರು.ಶಿವಪ್ರಸಾದ್ ಹಾಲೆಮಜಲು ನಿರೂಪಿಸಿದರು.ಜೀವನ್ ಶೆಟ್ಟಿಗದ್ದೆ ವಂದಿಸಿದರು. ಪೂರ್ವಾಹ್ನ ಪ್ರತಿಷ್ಠೆ ಗಣಪತಿ ಹೋಮ, ಭಜನಾ ಸಂಕೀರ್ತನೆ, ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಜರಗಿತು.


ಸೆ.1. ರಂದು ಪೂರ್ವಾಹ್ನ ಗಂಟೆ 9ರಿಂದ ಬೆಳಗಿನ ಪೂಜೆ, ನಾಗತೀರ್ಥ ಪಂಚಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಗಂಟೆ 12:45 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಿಂದ ಭಜನಾ ಸಂಕೀರ್ತನೆ.ರಾತ್ರಿ ಗಂಟೆ 7.30ರಿಂದ ಸಭಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯ ಅಧ್ಯಕ್ಷ ಜಯರಾಮ ಕಲ್ಲಾಜೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಬಂದರು ,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಯಕ್ಷಗಾನ ಅರ್ಥಧಾರಿ ಮತ್ತು ಬರಹಗಾರ ರಾಧಾಕೃಷ್ಣ ಕಲ್ಚಾರ್ ವಿಟ್ಲ ಉಪನ್ಯಾಸ ನೀಡಲಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನೆ ನಿರ್ದೇಶಕ ಪ್ರವೀಣ್ ಕುಮಾರ್ ಬಹುಮಾನ ವಿತರಣೆ ಮಾಡಲಿದ್ದಾರೆ.ಬಳಿಕ ಮಹಾ ಪೂಜೆ, ಪ್ರಸಾದ ವಿತರಣೆ ಜರುಗಲಿದೆ.ಸಂಜೆ ಗಂಟೆ 6ರಿಂದ 7.30ರ ತನಕ ಗಾನ ವೈಭವ ಜರುಗಲಿದ್ದು ದಿನೇಶ್ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಪ್ರಶಾಂತ್ ರೈ ಪಂಜ, ರಚನಾ ಚಿದ್ಗಲ್ಲು ಹಾಡುಗಾರಿಕೆಯಲ್ಲಿ, ಆನಂದ ಪಡ್ರೆ ಚೆಂಡೆ ಮತ್ತು ಚಂದ್ರಶೇಖರ ಗುರುವಾಯನ ಕೆರೆ ಮದ್ದಲೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ರಾತ್ರಿ ಗಂಟೆ 9ರಿಂದ ಕುಸಲ್ದ ರಂಗ ಮಾಣಿಕ್ಯ ಸುಕೇಶ್ ಶೆಟ್ಟಿ ಪಡುಪದವು ನಿರ್ದೇಶನದ ರಂಗ ಕೇಸರಿ ರಮೇಶ್ ರೈ ಕುಕ್ಕುವಳ್ಳಿ ಸಾರಥ್ಯದ ಜೈ ಮಾತಾ ಕಲಾತಂಡ ತೆಲಿಕೆದ ಕಲಾವಿದರು ಮಂಗಳೂರು ಪ್ರಸ್ತುತಿಯ “ಒಂತೆ ಕಾಪುಲೆ”ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಸೆ. 2ರಂದು ಪೂರ್ವಾಹ್ನ ಗಂಟೆ 8:30 ರಿಂದ ಬೆಳಗಿನ ಪೂಜೆ, ಅಡ್ಡಬೈಲು ಶ್ರೀ ಕೃಷ್ಣ ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.ಸಂಜೆ ಗಂಟೆ 3ರಿಂದ ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ನಾಗತೀರ್ಥ ಸಂಗಮದಲ್ಲಿ ಜಲಸ್ತಂಭನ ಜರುಗಲಿದೆ.