ಬಳ್ಪದ ಪಾದೆಯಲ್ಲಿ ಶ್ರೀ ಗಣೇಶೋತ್ಸವ

0

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಾದೆ ಬಳ್ಪ ಇದರ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ. 31ರಂದು ಪಾದೆ ಬಸ್ ನಿಲ್ದಾಣದ ಬಳಿ ನಡೆಯುತ್ತಿದೆ.


ಪೂರ್ವಾಹ್ನ ಗಣಪತಿ ಪ್ರತಿಷ್ಠೆ, ಬಳಿಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮತ್ತು ಶ್ರೀ ಧರ್ಮಶಾಸ್ತಾವು ಭಜನಾ ಮಂಡಳಿ ಬಳ್ಪ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನ ಸಮರ್ಪಣೆ ಜರಗಿತು. ಸಂಜೆ 3.00ಕ್ಕೆ ಶೋಭಾಯಾತ್ರೆಯೊಂದಿಗೆ ಗಣಪತಿಯ ಜಲಸ್ಥಂಭನ ನಡೆಯಲಿದೆ. ಸಮಿತಿಯ ಅಧ್ಯಕ್ಷರಾಗಿ ಸತ್ಯನಾರಾಯಣ ಕೂಜೆಗುರಿ, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಅಕ್ಕೇಣಿ, ಖಜಾಂಜಿಯಾಗಿ ರಾಮಕೃಷ್ಣ ಪಡ್ಯೋಟ್ಟು ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.