ಕೋಲ್ಚಾರು ಬೆಳ್ಳಿ ಹಬ್ಬದ ಗಣೇಶೋತ್ಸವಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ರಿಂದ ಚಾಲನೆ

0

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ

ರಾಷ್ಟ್ರೀಯ ಭಾವೈಕ್ಯತೆಗೆ ಪೂರಕವಾದ ಸುಂದರ ಮೂರ್ತಿ ಗಣಪತಿ , ಆಸ್ತಿಕ ಧಾರ್ಮಿಕ ನೆಲೆಗಟ್ಟಿಗೆ ಭದ್ರ ಬುನಾದಿ ಪ್ರೇರಣೆ ಗಣೇಶೋತ್ಸವ ಆಚರಣೆ : ಡಾ.ವಿನಾಯಕ ಭಟ್

ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ 26 ನೇ ವರ್ಷದ ಬೆಳ್ಳಿ ಹಬ್ಬದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಆ.31 ರಂದು ಶಾರದಾಂಬಾ ಕಲಾ ವೇದಿಕೆ ಕೋಲ್ಚಾರಿನಲ್ಲಿ ನಡೆಯಿತು.

ಬೆಳಗ್ಗೆ ವೇದವ್ಯಾಸ ತಂತ್ರಿಯವರಿಂದ ಗಣಪತಿ ಹವನ ಮತ್ತು ಗಣಪತಿ ವಿಗ್ರಹ ಪ್ರತಿಷ್ಠಾಪನೆಯು ನೆರವೇರಿತು. ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಉಪಾಧ್ಯಕ್ಷ ಸೀತಾರಾಮ ಕೊಲ್ಲರಮೂಲೆ ವಹಿಸಿದ್ದರು. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಒಕ್ಕಲಿಗರ ಸಂಘ ದ ಉಪಾಧ್ಯಕ್ಷ ಡಾ.ಕೆ.ವಿ.ರೇಣುಕಾಪ್ರಸಾದ್ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.


ಯಕ್ಷಗಾನ ಕಲಾವಿದ, ಧಾರ್ಮಿಕ ಚಿಂತಕ ಸಂಸ್ಕೃತ ವಿದ್ವಾಂಸರು ಡಾ.ವಿನಾಯಕ ಭಟ್ ಗಾಳಿಮನೆ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅಭ್ಯಾಗತರಾಗಿ ಶಾರದಾಂಬಾ ಭಜನಾ ಮಂದಿರದ ಮಾಜಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಭಜನಾ ಮಂದಿರದ ಗೌರವಾಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಮಂದಿರದ ಅಧ್ಯಕ್ಷ ಯತಿರಾಜ್ ಕೊಯಿಂಗಾಜೆ, ಕಾರ್ಯದರ್ಶಿ ಮಹಾಲಿಂಗ ಕಣಕ್ಕೂರು, ಕೋಶಾಧಿಕಾರಿ ಕಮಲಾಕ್ಷ ಕೊಯಿಂಗಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ನಾಟಿ ವೈದ್ಯೆ ಶ್ರೀಮತಿ ಮೀನಾಕ್ಷಿ ಕೋಲ್ಚಾರು,ನಾಟಿ ವೈದ್ಯರಾದ ಸೋಮನಾಥ ನಾಯ್ಕ ಕಣಕ್ಕೂರು, ಯಕ್ಷಗಾನ ಕಲಾವಿದ ನಿವೃತ್ತ ಶಿಕ್ಷಕ ಕೊರಗಪ್ಪ ಮಾಸ್ತರ್ ಕಣಕ್ಕೂರು, ಕಾರ್ಮಿಕ ಸೇವಕ ಹುಕ್ರಪ್ಪ ಗೌಡ ಕೊನ್ನೋಡಿ ಯವರನ್ನು ಹಾಗೂ ತಾಂತ್ರಿಕ ವಿಭಾಗದಲ್ಲಿ ವೇದವ್ಯಾಸ ತಂತ್ರಿಯವರನ್ನು ಸನ್ಮಾನಿಸಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ , ಸುಳ್ಯ ಎ.ಒ.ಎಲ್.ಇ. ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾ ಪ್ರಸಾದ್ ರವರನ್ನು ಸಮಿತಿ ಯ ವತಿಯಿಂದ ಸನ್ಮಾನಿಸಲಾಯಿತು.

ಪ್ರೌಢ ಶಿಕ್ಷಣ ಮತ್ತು ಕಾಲೇಜು ವಿಭಾಗದಲ್ಲಿ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕ ಯುವ ಪ್ರತಿಭೆಗಳನ್ನು ಅಭಿನಂದಿಸಲಾಯಿತು.


26 ವರ್ಷಗಳ ಕಾಲ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಿಕಟ ಪೂರ್ವ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಸ್ಥಾಪಕಾಧ್ಯಕ್ಷ ಪುರುಷೋತ್ತಮ ಕೋಲ್ಚಾರು ಮತ್ತು ಹರೀಶ್ ಕೊಯಿಂಗಾಜೆ ಯವರನ್ನು ಸನ್ಮಾನಿಸಲಾಯಿತು. ಮಂದಿರದ ಮಾಜಿ ಅಧ್ಯಕ್ಷ ವಾಮನ ಗೌಡ ಕೊಯಿಂಗಾಜೆ ಪ್ರಾರ್ಥಿಸಿದರು.


ಗೌರವಾಧ್ಯಕ್ಷ ಪುರುಷೋತ್ತಮ ಕೋಲ್ಚಾರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಪ್ರಣೀತ್ ಕಣಕ್ಕೂರು, ವಿನೋದ್ ಕೊಯಿಂಗಾಜೆ, ಸುದರ್ಶನ ಪಾತಿಕಲ್ಲು ಸನ್ಮಾನ ಪತ್ರ ವಾಚಿಸಿದರು. ಗೌರವಾಧ್ಯಕ್ಷ ಧರ್ಮಪಾಲ ಕೊಯಿಂಗಾಜೆ ವಂದಿಸಿದರು.
ಮುಖ್ಯ ಶಿಕ್ಷಕ ರಾಧಾಕೃಷ್ಣ ಕೊಯಿಂಗಾಜೆ ಕಾರ್ಯಕ್ರಮ ನಿರೂಪಿಸಿದರು.


ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಭಜನಾ ಮಂದಿರದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.