ಪಾಲೆಪ್ಪಾಡಿ 30 ನೇ ವರ್ಷದ ಗಣೇಶೋತ್ಸವ

0

ಸಂಜೆ ವೈಭವದ ಶೋಭಾಯಾತ್ರೆ – ಜಲಸ್ತಂಭನ

ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಾಲೆಪ್ಪಾಡಿ ವತಿಯಿಂದ 30 ನೇ ವರ್ಷದ ಶ್ರೀ ಗಣೇಶ ಚತುರ್ಥಿ ಆಚರಣೆಯು ಆ.31 ರಂದು ಮಂಜುಶ್ರೀ ಕ್ರೀಡಾಂಗಣ ದರ್ಖಾಸ್ತು ಪಾಲೆಪ್ಪಾಡಿಯಲ್ಲಿ ಪ್ರಾರಂಭಗೊಂಡಿತು.


ಬೆಳಿಗ್ಗೆ ಗಂಟೆ 10.00 ರಿಂದ ಶ್ರೀ ಗಣಪತಿ ಹವನ ಹಾಗೂ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.


ಸಂಜೆ ಎಸ್.ಎಸ್.ಎಲ್.ಸಿಯಲ್ಲಿ 2021-22 ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಪವನ್ ಕೋಡ್ತೀಲು ರವರನ್ನು ಗೌರವಿಸಲಾಗುವುದು.
ಸಂಜೆ ಗಂಟೆ 4.30 ರಿಂದ ಶ್ರೀ ಗಣೇಶನ ವಿಜೃಂಭಣೆಯ ಶೋಭಾಯಾತ್ರೆ ಹೊರಟು ಪಾಲೆಪ್ಪಾಡಿ ಕುವೆತ್ತೋಡು ಹೊಳೆಯಲ್ಲಿ ಜಲಸ್ತಂಭನ ಮಾಡಲಾಗುವುದು.