ಕುಕ್ಕುಜಡ್ಕದಲ್ಲಿ 30 ನೇ ವರ್ಷದ ಶ್ರೀ ಗಣೇಶೋತ್ಸವ- ಭಜನಾ ಕಾರ್ಯಕ್ರಮ

0

ಕುಕ್ಕುಜಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ 30 ನೇ ವರ್ಷದ ಸಾರ್ವಜನಿಕ. ಗಣೇಶೋತ್ಸವವು ಆ.31 ರಂದು ನಡೆಯಿತು. ಬೆಳಗ್ಗೆ ‌ಪುರೋಹಿತ ವೇದಮೂರ್ತಿ ರಾಧಾಕೃಷ್ಣ ಜೋಗಿಯಡ್ಕ ರವರ ನೇತೃತ್ವದಲ್ಲಿ ಗಣಪತಿ ಹವನ ಮತ್ತು ಗಣಪತಿ ಮೂರ್ತಿ ಪ್ರತಿಷ್ಠೆ ಯಾಯಿತು.

ಬಳಿಕ ಸಮರ್ಪಣ ಭಜನಾ ಮಂಡಳಿ ಕುಕ್ಕುಜಡ್ಕ,‌ ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಪಿಲಿಕಜೆ, ಪ್ರಸನ್ನಾಂಜನೇಯ ಭಜನಾ ಮಂಡಳಿ ಅಂಜನಾದ್ರಿಅಡ್ಕಾರು ಇವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಮಧ್ಯಾಹ್ನ ‌ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸ್ಥಳೀಯ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.