ರೆಂಜಾಳ ದೇವಾಲಯದಲ್ಲಿ ವಿಜ್ರಂಭಣೆಯಿಂದ ನಡೆದ ಚೌತಿ ಉತ್ಸವ

0

ಮರ್ಕಂಜ ಹಾಗೂ ನೆಲ್ಲೂರುಕೆಮ್ರಾಜೆ ಗ್ರಾಮಗಳಿಗೊಳಪಟ್ಟ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ದೇವಾಲಯದಲ್ಲಿ ಚೌತಿ ಉತ್ಸವವು ಇಂದು ವಿಜ್ರಂಭಣೆಯಿಂದ ನಡೆಯಿತು.


ಬೆಳಿಗ್ಗೆ ಉಷಾಃಪೂಜೆ ನಡೆದು ಅಂಗಡಿಮಜಲು ಅಯ್ಯಪ್ಪ ಭಜನಾ ಮಂಡಳಿ ಮತ್ತು ಕೊರತ್ತೋಡಿ ಶ್ರೀ ಚಾಮುಂಡೇಶ್ವರೀ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 9.30ರಿಂದ 12 ತೆಂಗಿನಕಾಯಿ ಗಣಪತಿ ಹವನ ಹಾಗೂ ಅಕ್ಷರಾಭ್ಯಾಸ ನಡೆಯಿತು.
ಮಧ್ಯಾಹ್ನ ಮಹಾಪೂಜೆ ನಡೆದು ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ಸಾವಿರಕ್ಕಿಂತಲೂ ಅಧಿಕ ಭಕ್ತರು ಆಗಮಿಸಿ ಶ್ರೀ ದೇವರ ಪ್ರಸಾದ ಪಡೆದರು.
ಸಂಜೆ 6 ರಿಂದ 8 ರವರೆಗೆ ಚೌತಿ ಪ್ರಯುಕ್ತ ಶಿವಪಂಚಾಕ್ಷರಿ ಭಜನಾ ಮಂಡಳಿ ವತಿಯಿಂದ ವಿಶೇಷ ಭಜನಾ ಸೇವೆ ಹಾಗೂ ಕೊಟ್ರಡ್ಕ ಶ್ರೀಮತಿ ಚೋಮಕ್ಕ ಮತ್ತು ಮಕ್ಕಳ ವತಿಯಿಂದ ವಿಶೇಷ ಪೂಜೆ ನಡೆಯಲಿದೆ. ರಾತ್ರಿ 8.30 ಕ್ಕೆ ಸಾಮೂಹಿಕ ಕಾರ್ತಿಕ ಪೂಜೆ ನಡೆದು ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.