ದುಗ್ಗಲಡ್ಕದಲ್ಲಿ 22ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

0

ಧಾರ್ಮಿಕ ಉಪನ್ಯಾಸ- ಭಕ್ತಿ ರಸಮಂಜರಿ

ಗಣೇಶೋತ್ಸವ ಪ್ರಕೃತಿಯ ಆರಾಧನೆ- ರಘುರಾಜ್ ಉಬರಡ್ಕ

ದುಗ್ಗಲಡ್ಕದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ದುಗ್ಗಲಡ್ಕದ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ಇಂದು ನಡೆಯುತ್ತಿದೆ.
ಬೆಳಿಗ್ಗೆ ಧ್ವಜಾರೋಹಣ, ಗಣಪತಿ ಹವನ, ಭಜನಾ ಕಾರ್ಯಕ್ರಮ ನಡೆಯಿತು.


ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಪುತ್ರೂರು ವಿವೇಕಾನಂದ ಮಹಾವಿದ್ಯಾಲಯಲದ ಉಪನ್ಯಾಸಕ ರಘುರಾಜ್ ಉಬರಡ್ಕ ಧಾರ್ಮಿಕ ಉಪನ್ಯಾಸವನ್ನು ನೀಡಿ ಗಣಪತಿಯ ಪೂಜೆ ಎಂದರೆ ಅದು ಪ್ರಕೃತಿಯ ಆರಾಧನೆ. ಸಂಸ್ಕಾರಯುತ ಜೀವನವನ್ನು ಅಳವಡಿಸುವ ಅಗತ್ಯತೆ ಇದೆ.ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಧನಂಜಯ(ಮನು) ದುಗ್ಗಲಡ್ಕ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಶ್ರೀ ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ, ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ ನೀರಬಿದಿರೆ ಶುಭ ಹಾರೈಸಿದರು. ವೇದಿಕೆಯಲ್ಲಿ ದುಗ್ಗಲಾಯ ದೈವಸ್ಥಾನ ಸಮಿತಿ ಅಧ್ಯಕ್ಷ ಸುಂದರ ರಾವ್,ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗ್ಗಲಡ್ಕ, ದುಗ್ಗಲಾಯ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ರೈ, ದುಗ್ಗಲಾಯ ಯುವಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ನಾಯ್ಕ್ ಗಣಪತಿ ವಿಗ್ರಹದ ದಾನಿ, ಉದ್ಯಮಿ ಶಿವಪ್ರಸಾದ್ ಕೊಯಿಕುಳಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯತೀಶ್ ರೈ , ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಶ್ರೀಮತಿ ಶೈಲಜಾ ವಂದಿಸಿದರು, ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ಮಹಾಪೂಜೆ ಪ್ರಸಾದ ವಿತರಣೆ ನಡೆದು, ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ್ನ ನಂತರ ಶಶಿಧರ ಮಾವಿನಕಟ್ಟೆ ಮತ್ತು ಬಳಗದವರಿಂದ ಭಕ್ತಿ ರಸಮಂಜರಿ ನಡೆದು ಭಕ್ತಾಧಿಗಳನ್ನು ಆಕರ್ಷಿಸಿತು.