ಸಂಪಾಜೆ : 28 ನೇ ವರ್ಷದ ಗೌರಿ ಗಣೇಶೋತ್ಸವ

0

 

ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಸಂಪಾಜೆ ಹಾಗೂ ಪಯಸ್ವಿನಿ ಯುವಕ ಸಂಘ(ರಿ) ಸಂಪಾಜೆ ಕೊಡಗು ಸಂಯುಕ್ತ ಆಶ್ರಯದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ೨೮ನೇ ವರ್ಷದ ಗೌರಿ ಗಣೇಶೋತ್ಸವದ ಪ್ರಯುಕ್ತ ಆ.31 ರಂದು ಶ್ರೀ ಗಣೇಶನ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.


ನಂತರ ಪಂಚಲಿಂಗೇಶ್ವರ ದೇವಾಲಯದಿಂದ ಸಂಪಾಜೆ ಚಡಾವು ತನಕ ಮೆರವಣಿಗೆ ಮೂಲಕ ಪುನಃ ಸಂಪಾಜೆ ಗೇಟ್ ಮೂಲಕ ಚೌಕಿಗೆ ಬಂದು ದೇವಿಪ್ರಸಾದರ ಮನೆ ಬಳಿ ಹೊಳೆಯಲ್ಲಿ ಜಲಸ್ತಂಭನ ಮಾಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಂಘದವರು ಭಾಗವಹಿಸಿದ್ದರು.