ವಿದ್ಯಾರ್ಥಿಗೆ ಹಿಗ್ಗಾ-ಮುಗ್ಗಾ ಥಳಿಸಿದ ಆರೋಪಿಗಳ ಮೇಲೆ ಕೊಲೆಯತ್ನ ಕೇಸ್ ದಾಖಲಿಸಿ, ಬಂಧಿಸಲು ಸುಳ್ಯ ಯೂತ್ ಕಾಂಗ್ರೆಸ್ ಆಗ್ರಹ

0

 

ಶಾಂತಿ ಕಾಪಾಡಲು ಮನವಿ

ಸ್ನೇಹಿತೆ ಯೊಂದಿಗೆ ಮಾತನಾಡಿದನೆಂಬ ಕಾರಣಕ್ಕೆ ಕಾಲೇಜ್ ವಿದ್ಯಾರ್ಥಿಯೊಬ್ಬನನ್ನು ಥಳಿಸಿದ ಘಟನೆಯನ್ನು ಯೂತ್ ಕಾಂಗ್ರೆಸ್ ಖಂಡಿಸುತ್ತದೆ. ಹಾಗೂ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಕೊಲೆಯತ್ನದ ಕೇಸು ದಾಖಲಿಸಿ ಬಂಧಿಸಬೇಕು ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಆಗ್ರಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ತಾಲೂಕಿನಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದರೂ ನಂತರ ಇದೀಗ ಕ್ರಮೇಣ ತಳಹದಿಗೆ ಬರುತ್ತಿದ್ದು ಅದರೆಡೆಯಲ್ಲಿ ಇಂತಹ ಕೋಮು ಸಂಘರ್ಷಕ್ಕೆ ಕಾರಣವಾಗುವ ಕೃತ್ಯ ನಡೆಸುತ್ತಿರುವುದು ಖಂಡನೀಯ.

ತಾಲ್ಲೂಕಿನಲ್ಲಿ ಶಾಂತಿ ನೆಲೆಸಬೇಕಾದರೆ ಎಲ್ಲರೂ ಸಂಯಮವನ್ನು ಕಾಪಾಡಬೇಕು.ಸಣ್ಣಪುಟ್ಟ ಘಟನೆಗೂ ಹಲ್ಲೆ, ಕೊಲೆ,ಪ್ರತಿಕಾರ ನಡೆಸುತ್ತಾ ಹೋದರೆ ಸಮಾಜ ಎಲ್ಲಿ ಹೋಗಿ ನಿಲ್ಲಬಹುದು ಎಂದು ಆಲೋಚಿಸಬೇಕು.
ಇಲ್ಲಿ ಪೋಲಿಸ್ ಕಾನೂನು ವ್ಯವಸ್ಥೆ ಇರುವಾಗ ಯಾರೇ ಆದರೂ ಕಾನೂನು ಕೈಗೆತ್ತಿಕೊಂಡು ಪೂರ್ವ ಗ್ರಹ ಪೀಡಿತರಾಗಿ ವರ್ತಿಸುವುದು ಸಮಂಜಸವಲ್ಲ.ಇದರಿಂದ ಶಾಂತಿ ನೆಲೆಸಲು ಸಾಧ್ಯವಿಲ್ಲ.
ಘಟನೆ ಬೆಳಕಿಗೆ ಬಂದ ಕೂಡಲೇ ಸಂತ್ರಸ್ತ ವಿದ್ಯಾರ್ಥಿಯನ್ನು ಬೇಟಿ ಯಾಗಿ ಮಾನಸಿಕ ಧೈರ್ಯ ನೀಡಿ ಪ್ರಕರಣ ದಾಖಲಿಸಿದ ಸುಳ್ಯ ಪೋಲಿಸ್ ಠಾಣಾಧಿಕಾರಿಯವರ ಕ್ರಮ ಶ್ಲಾಘನೀಯ.
ಈ ಪ್ರಕರಣದ ಆರೋಪಿಗಳ ವಿರುದ್ಧ ಪೋಲಿಸ್ ಇಲಾಖೆ ಕೊಲೆಯತ್ನ (307) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೂಡಲೇ ಬಂದಿಸಬೇಕು. ಹಾಗೂ ಕಾಲೇಜ್ ಆಡಳಿತ ಸಮಿತಿಯು ಇಂತಹ ಕೃತ್ಯದಲ್ಲಿ ಭಾಗಿಯಾದ ವಿದ್ಯಾರ್ಥಿ ಗಳನ್ನು ಕಾಲೇಜ್ ನಿಂದ ವಜಾಗೊಳಿಸಬೇಕು ಹಾಗೂ ನಗರದಲ್ಲಿ ಪೋಲಿಸ್ ಭದ್ರತೆಯನ್ನು ಹೆಚ್ಚಿಸಿ ಇದಕ್ಕೆ ಪ್ರತಿಕಾರ ಆಗದ ರೀತಿಯಲ್ಲಿ ಪೋಲಿಸ್ ಇಲಾಖೆ ಎಚ್ಚರಿಕೆ ವಹಿಸಬೇಕೆಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.