ವಿಶ್ವಮಾನ್ಯ ಕನ್ನಡಿಗ ಪುರಸ್ಕಾರಕ್ಕೆ ಸೇರ ಕೋಟಿಯಪ್ಪ ಪೂಜಾರಿ ಆಯ್ಕೆ

0

 

ಗ್ರಾಮಾ೦ತರ ಬುದ್ದಿಜೀವಿಗಳ ಬಳಗ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಮೈಸೂರು ಇವರು ಕೊಡಮಾಡುವ ರಾಜ್ಯ ಮಟ್ಟದ ವಿಶ್ವಮಾನ್ಯ ಕನ್ನಡಿಗ ಪುರಸ್ಕಾರಕ್ಕೆ ಸೇರ ಕೋಟಿಯವ ಪೂಜಾರಿಯವರನ್ನು ಆಯ್ಕೆ ಮಾಡಲಾಗಿದೆ.
ಸಾಹಿತ್ಯ, ಶಿಕ್ಷಣ ಸೇವೆ, ಬರಹ, ಕನ್ನಡ ನಾಡುನುಡಿ, ಸಮಾಜಸೇವೆ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ. ರಾಜ್ಯದಿಂದ ಆಯ್ಕೆಯಾಗಿರುವ ೬ ಜನ ಪುರಸ್ಕೃತರಲ್ಲಿ ಸೇರ ಕೊಟಿಯಪ್ಪ ಪೂಜಾರಿಯವರು ಒಬ್ಬರಾಗಿದ್ದಾರೆ. ಸೆಪ್ಟೆಂಬರ್‌ನಲ್ಲಿ ಮೈಸೂರಿನಲ್ಲಿ ನಡೆಯುವ ಸಾಹಿತ್ಯೋತ್ಸವ ಸಮಾರಂಭದಲ್ಲಿ ಹಿರಿಯ ಕವಿ ಡಾ||ದೊಡ್ಡರಂಗೇಗೌಡ ಸೇರಿದಂತೆ ಹಲವಾರು ಅತಿಥಿಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಗ್ರಾಹಕ ಕ್ಲಬ್‌ನ ಉತ್ತಮ ಸಂಯೋಜಕ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರ, ಸನ್ಮಾನಗಳಿಗೆ ಭಾಜನರಾಗಿರುವ ಕೋಟಿಯಪ್ಪ ಪೂಜಾರಿಯವರು ಲೇಖಕ, ಉತ್ತಮ ಬರಹಗಾರ ಹಾಗೂ ಸಂಘಟಕರಾಗಿದ್ದಾರೆ.
ಕೋಟಿಯಪ್ಪ ಪೂಜಾರಿಯವರು ಸುಳ್ಯ ಸಿಸಿಆರ್‌ಟಿ ಬಳಗದ ಗೌರವ ಸಲಹೆಗಾರರಾಗಿದ್ದಾರೆ.