ಎಣ್ಮೂರು :  3೦ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

 

 

 

ಕೋಟಿ ಚೆನ್ನಯ ನಗರ ಎಣ್ಮೂರು ಶ್ರೀ ಸೀತಾರಾಮಾಂಜನೇಯ ಭಾರತಿ ಮಂದಿರ ವಠಾರದಲ್ಲಿ ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನ ವತಿಯಿಂದ ೩೦ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.೩೧ ಮತ್ತು ಸೆ.೧ ರಂದು ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಣ್ಮೂರು ಶ್ರೀ ನಾಗ ಬ್ರಹ್ಮ ಕೋಟಿ ಚೆನ್ನಯ ಗರಡಿ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಒಗ್ಗಟ್ಟಿದ್ದರೆ ಕಠಿಣ ಸಮಯದಲ್ಲಾದರೂ ಉತ್ಸವ ಸಮಾರಂಭ ಮಾಡಬಹುದು. ಸಂಘಟನಾ ಸ್ಪಂದನೆ ಅಗತ್ಯವಾಗಿದೆ. ಮೂಲಮಂತ್ರವೂ ಹೌದೆಂದರು.


ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿದರು. ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಧಾರ್ಮಿಕ ಉಪನ್ಯಾಸ ನೀಡಿದರು. ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್. ಪ್ರಸಾದ್, ಎಡಮಂಗಲ ಗ್ರಾಪಂ ಉಪಾಧ್ಯಕ್ಷೆ ಶ್ರೀಮತಿ ರೇವತಿ ಎಣ್ಮೂರು, ಸಮಿತಿಯ ಗೌರವ ಸಲಹೆಗಾರರಾದ ಎನ್.ಜಿ. ಲೋಕನಾಥ ರೈ ಪಟ್ಟೆ ಎಣ್ಮೂರು, ಸಮಿತಿ ಅಧ್ಯಕ್ಷ ದಾಮೋದರ ಗೌಡ ಚೆಕ್ಕಡ್ಕ, ಸೀತಾ ರಾಮಾಂಜನೇಯ ಭಜನಾ ಮಂದಿರದ ಅಧ್ಯಕ್ಷ ರಘುನಾಥ ರೈ ಕಟ್ಟಬೀಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರೀಡಾ ಸ್ಪರ್ಧೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಣೆ ನಡೆಯಿತು. ರಘುನಾಥ ರೈಯವರು ಸ್ವಾಗತಿಸಿ ಪ್ರಸ್ತಾವನೆಗೈದರು. ಸುದಿನ್ ಕುಮಾರ್ ವಂದಿಸಿದರು. ಸುಹಾಸ್ ಅಲೆಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಒಡಿಯೂರು ಎಣ್ಮೂರು ಘಟ ಸಮಿತಿಯ ಸೇವಾದೀಕ್ಷೆಯರು, ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನ ಹಾಗೂ ವಿಶ್ವಸ್ಥ ಮಂಡಳಿಯ ಮತ್ತು ಶ್ರೀರಾಮ ಭಜನಾ ಮಂಡಳಿಯ ಪದಾಧಿಕಾರಿಗಳು, ಸಹಕರಿಸಿದರು. ಎಣ್ಮೂರು ಗುತ್ತಿಗೆ ಬೈಲು ನಾಗಕಟ್ಟೆ ಸಮೂಹ ಸಮಿತಿ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಗುರುತಿಸಲಾಯಿತು.
ಶ್ರೀ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಪೆರ್ಲಂಪಾಡಿ ಶ್ರೀ ಆದಿಶಕ್ತಿ ಭಜನಾ ಮಂಡಳಿಯ ಮಹಿಳಾ ಭಜಕರಿಂದ ಕುಣಿತ ಭಜನೆ ನಡೆಯಿತು.
*ಶ್ರೀ ಮಹಾ ಗಣಪತಿ ದೇವರ ವೈಭವದ ಶೋಭಯಾತ್ರೆ*
ನಂತರ ವೈಭವದಿಂದ ನಡೆದ ಶ್ರೀ ದೇವರ ಮೆರವಣಿಗೆಯಲ್ಲಿ ಪಡ್ಪಿನಂಗಡಿ ವಿನಾಯಕ ಮಂದಿರದ ಬಳಿ ಪೂಜಿಸಲ್ಪಟ್ಟು, ಕಲ್ಲೇರಿಯಲ್ಲಿ ಕಟ್ಟೆ ಪೂಜೆ ಬಳಿಕ ಕಲ್ಲೇರಿ ಹೊಳೆಯಲ್ಲಿ ಜಲಸ್ತಂಭನ ಮಾಡಿ ನಂತರ ಧ್ವಜ ಅವತರಣ ನಡೆಯಿತು.