ಅರಂತೋಡಿನಲ್ಲಿ ಗಣೇಶೋತ್ಸವ

0

 

ಶ್ರೀ ದುರ್ಗಾ ಫ್ರೆಂಡ್ಸ್, ಅರಂತೋಡು ಇದರ ಆಶ್ರಯದಲ್ಲಿ  ಆ. 28 ರಂದು ಶ್ರೀ ತೋಟಂಪಾಡಿ ಉಳ್ಳಾಕುಳು ದೈವಸ್ಥಾನ, ಅರಂತೋಡು ಇಲ್ಲಿ ಪ್ರಥಮ ವರ್ಷದ ಗಣೇಶೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಅರಂತೋಡು ಹಾಗೂ ಪರವೂರಿನ ನಾಗರಿಕರು  ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಎಣ್ಣೆ ಕಂಬ, ಹಗ್ಗ ಜಗ್ಗಾಟ(ಪುರುಷರು ಹಾಗೂ ಮಹಿಳೆಯರು), ಮೊಸರು ಕುಡಿಕೆ (ಪುರುಷರು ಹಾಗೂ ಮಹಿಳೆಯರು), ಮ್ಯಾರಥಾನ್ (ಹೈ ಸ್ಕೂಲ್ ಮತ್ತು ಕಾಲೇಜ್ ವಿದ್ಯಾರ್ಥಿಗಳು) ಹಾಗೂ ಚಿಕ್ಕ ಮಕ್ಕಳಿಗೆ ಲಕ್ಕಿಗೇಮ್ ಆಯೋಜಿಸಲಾಯಿತು. ಗಣೇಶೋತ್ಸವ ನಿಮಿತ್ತ ಮಾಡಲಾದ ಲಕ್ಕಿ ಡಿಪ್ ಡ್ರಾ ಮಾಡಲಾಯಿತು. ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.