ಕೆ.ವಿ.ಜಿ. ಕ್ಯಾಂಪಸ್‌ನಲ್ಲಿ ನೂತನ ಕೆ.ವಿ.ಜಿ ಫುಡ್ ಸೆಂಟರ್ ಆರಂಭ

0

ಜನರ ಅಗತ್ಯತೆಗಳನ್ನು ಪೂರೈಸುವ ಉದ್ಯಮವಾಗಿ ಬೆಳೆಯಲಿ ಡಾ. ರೇಣುಕಾ ಪ್ರಸಾದ್

 

ಕೆ.ವಿ.ಜಿ ಕ್ಯಾಂಪಸ್‌ನ ಹೃದಯ ಭಾಗದ ನಂದಿನಿ ಉತ್ಪನಗಳ ಮಾರಾಟ ಮಳಿಗೆಯ ಪ್ರಥಮ ಅಂತಸ್ತಿನಲ್ಲಿ ಪ್ರಕಾಶ್ ರೈ ಯವರ ಮಾಲಕತ್ವದಲ್ಲಿ ಕೆ.ವಿ.ಜಿ ಫುಡ್ ಸೆಂಟರ್ ಸಸ್ಯಹಾರಿ ಮತ್ತು ಮಾಂಸಹಾರಿ ಉಪಹಾರ ಮಂದಿರ ಸೆ ೦೨ರಂದು ಉದ್ಘಾಟನೆಗೊಂಡಿತು.


ಫುಡ್ ಸೆಂಟರ್‌ನ್ನು ಉದ್ಘಾಟಿಸಿ ಮಾತಾನಾಡಿದ ಅಕಾಡೆಮಿ ಆಫ್ ಲಿಬರಲ್‌ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿಗಳು ರಾಜ್ಯಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರು ಬೆಳೆಯುತ್ತಿರುವ ಕ್ಯಾಂಪಸ್‌ಗೆ ಶುಚಿ- ರುಚಿಯಾದ ಉಪಹಾರ ಮಂದಿರದ ಅವಶ್ಯಕತೆಯಿತ್ತು. ಇದನ್ನು ಮನಗಂಡು ಈ ದಿನ ಇದರ ವ್ಯವಸ್ಥೆಯನ್ನು ಪೂರ್ಣಗೊಳಿಸಿರುತ್ತೇವೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.ಕೆ.ವಿ.ಜಿ ಫುಡ್ ಸೆಂಟರ್‌ಗುಣಮಟ್ಟದತಿಂಡಿ ತಿನಿಸುಗಳನ್ನು ಪೂರೈಸಿ ಸರ್ವರ ಮನೆ ಮತ್ತು ಮನಸ್ಸನ್ನು ತಲುಪುವಂತಾಗಲಿ ಎಂದು ಶುಭ ಹಾರೈಸಿದ ರು.
ಈ ಸಂಧರ್ಭದಲ್ಲಿಎ.ಓ.ಎಲ್.ಇ (ರಿ) ಇದರ ನಿರ್ದೇಶಕರಾದಡಾ. ಜ್ಯೋತಿಆರ್ ಪ್ರಸಾದ್, ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿವಾಹಣಾಧಿಕಾರಿ ಡಾ. ಉಜ್ವಲ್‌ಊರುಬೈಲು, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎನ್.ಎರಾಮಚಂದ್ರ, ವರ್ತಕರ ಸಂಘದ ಅಧ್ಯಕ್ಷ ಸುಧಾಕರ್ ರೈ, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್, ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಆಡಳಿತ ಪರಿಷತ್ತು ಸದಸ್ಯರಾದ ಡಾ. ಮನೋಜ್ ಕುಮಾರ್ ಅಡ್ಡಂತಡ್ಕ, ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ವಿಭಾಗ ಮುಖ್ಯಸ್ಥರುಗಳು, ಆಡಳಿತಾಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.