ಹರಿಹರ ಪಲ್ಲತಡ್ಕ:13ನೇ ವರ್ಷದ ಶ್ರೀ ಗಣೇಶೋತ್ಸವ

0

 

ಸಾರ್ವಜನಿಕ ಗಣೇಶೋತ್ಸವ ಸಮಿತಿ ಹರಿಹರ ಪಲ್ಲತಡ್ಕ ಇದರ ವತಿಯಿಂದ 13ನೇ ವರ್ಷದ ಶ್ರೀ ಗಣೇಶೋತ್ಸವ ನಡೆಯಿತು.

 

ಹರಿಹರೇಶ್ವರ ದೇವಸ್ಥಾನದಲ್ಲಿ ಆ. 30 ರಂದು ಶ್ರೀ ಗೌರಿ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು. ಆ 31ರಂದು ಬೆಳಗ್ಗೆ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು, ಬಳಿಕ ಶ್ರೀ ಗಣಪತಿ ಹೋಮ ನಡೆಯಿತು, ಸಂಜೆ ಕುಕ್ಕೆಶ್ರೀ ಭಜನಾ ಮಂಡಳಿ ಸುಬ್ರಹ್ಮಣ್ಯ ಇವರಿಂದ ಭಜನೆ. ಶ್ರೀ ಹರಿಹರೇಶ್ವರ ಭಜನಾ ಮಂಡಳಿ ಇವರಿಂದ ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿ ತಿರುಮಲ ಕಾರ್ಯಕ್ರಮ ನಡೆಯಿತು.

ಸೆ.1ರಂದು ಬೆಳಗ್ಗೆ ಚರ್ತುನಾಳಿಕೇರ ಗಣಹವನ, ಪೂರ್ಣಾಹುತಿ ನಡೆದು ಮಹಾಪೂಜೆ ನಡೆಯಿತು. ಅಪರಾಹ್ನ ಶ್ರೀ ಗೌರಿ ಮತ್ತು ಶ್ರೀ ಗಣೇಶ ಮೂರ್ತಿಯ ಶೋಭಾಯಾತ್ರೆ ಹರಿಹರೇಶ್ವರ ದೇವಸ್ಥಾನದಿಂದ ಹೊರಟು ಐನೆಕಿದು, ಕೋಟೆ, ಬಾಳುಗೋಡು ಆಗಿ ಹರಿಹರಕ್ಕೆ ಬಂದು ಹರಿಹರೇಶ್ವರ ಸಂಗಮ ಕ್ಷೇತ್ರದಲ್ಲಿ ಗೌರಿ ಮತ್ತು ಗಣೇಶ ಮೂರ್ತಿಯ ಜಲ ಸ್ತಂಭನ ನಡೆಯಿತು. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ನೂರಾರು ಸಂಖ್ಯೆಯ ಸಾರ್ವಜನಿಕರು ಈ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.