ದ.ಕ ಜಿಲ್ಲಾ ಚೆಸ್ ಎಸೋಸಿಯೇಶನ್ ಅಧ್ಯಕ್ಷರಾಗಿ ರಮೇಶ್ ಕೋಟೆ ಆಯ್ಕೆ

0

ದ.ಕ ಜಿಲ್ಲಾ ಚೆಸ್ ಎಸೋಸಿಯೇಶನ್ (ರಿ) ಮಂಗಳೂರು
ಗೌರವಾಧ್ಯಕ್ಷರಾಗಿ  ಸುನೀಲ್ ಆಚಾರ್, ಅಧ್ಯಕ್ಷರಾಗಿ ರಮೇಶ್ ಕೋಟೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಚೆಸ್ ಎಸೋಸಿಯೇಶನ್ ನ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಗಳಿಗೆ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಉಪಾಧ್ಯಕ್ಷರಾಗಿ ವಿ. ಪಿ ಆಶಿರ್ವಾದ ಹಾಗೂ ಶ್ರೀಮತಿ ವಾಣಿ.ಎಸ್.ಪಣಿಕ್ಕರ್
ಕಾರ್ಯದರ್ಶಿ ಯಾಗಿ,ಶ್ರೀ ಅಭಿಷೇಕ್ ಕಟ್ಟೆಮಾರ್ , ಕೋಶಾಧಿಕಾರಿಯಾಗಿ ಶ್ರೀಮತಿ ಪೂರ್ಣಿಮಾ.ಎಸ್.ಆಳ್ವ, ಕಾರ್ಯಕಾರಿ ಸಮಿತಿಗೆ , ಶ್ರೀಮತಿ ರಮ್ಯಾ ರೈ ಹಾಗೂ ಸತ್ಯಪ್ರಸಾದ್ ಕೆ. ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.