ಎಲಿಮಲೆ ಮದರಸದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಹಾಗೂ ಸ್ಪರ್ಧಾ ಕಾರ್ಯಕ್ರಮ

0

 

ನುಸ್ರತುಲ್ ಇಸ್ಲಾಮ್ ಎಸೋಸಿಯೇಶನ್ ರಿ ಎಲಿಮಲೆ ಇದರ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಅಂಗವಾಗಿ ಎಲಿಮಲೆ ಜಮಾಅತ್ ಗೊಳಪಟ್ಟ ಮದ್ರಸ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಎಲಿಮಲೆ ನೂರುಲ್ ಹುದಾ ಮದ್ರಸದಲ್ಲಿ ವಠಾರದಲ್ಲಿ ನಡೆಯಿತು.

ನೂರುಲ್ ಹುದಾ ಮದರಸ ಮೆತ್ತಡ್ಕ ,ಬುಸ್ತಾನುಲ್ ಉಲೂಂ ಮದರಸ ಜೀರ್ಮುಕ್ಕಿ ಹಾಗೂ ನೂರುಲ್ ಹುದಾ ಮದರಸ ಎಲಿಮಲೆ ಮತ್ತು ಹಯಾತುಲ್ ಇಸ್ಲಾಂ ದರ್ಸ್ ವಿದ್ಯಾರ್ಥಿಗಳಿಗೆ ದೇಶ ಹಾಗೂ ಸ್ವಾತಂತ್ರ್ಯದ ಕುರಿತು ವಿವಿಧ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು ..
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಎಲಿಮಲೆ ಮುದರ್ರಿಸ್ ಜೌಹರ್ ಅಹ್ಸನಿ ಯವರು ವಿದ್ಯಾರ್ಥಿಗಳಿಗೆ ದೇಶದ ಬಗ್ಗೆ ಮತ್ತು ಸ್ವಾತಂತ್ರ್ಯದ ಬಗ್ಗೆ ಅರಿವನ್ನು ಮೂಡಿಸುವ ಹಾಗೂ ಅವರ ಪ್ರತಿಭೆಗಳನ್ನು ಬೆಳಗಿಸುವ ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು ಸಂತಸದ ವಿಚಾರವಾಗಿದೆ. ಸತತ ಪ್ರಯತ್ನಗಳ ಮೂಲಕ ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ವಹಿಸಿದ್ದರು.
ನೂರುಲ್ ಹುದಾ ಮದರಸ ಮುಖ್ಯೋಪಾಧ್ಯಾಯರಾದ ಫೈಜಲ್ ಹಿಮಮಿ ಸಖಾಫಿ ಉದ್ಘಾಟಿಸಿದರು.
ಮಹಮೂದ್ ಸಖಾಫಿ ಎಲಿಮಲೆ ರವರು ಶುಭ ಹಾರೈಸಿದರು. ಜೀರ್ಮುಕ್ಕಿ ಮಸೀದಿ ಅಧ್ಯಕ್ಷರಾದ ಸಿದ್ದೀಕ್ ಜೀರ್ಮುಕ್ಕಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಹಾರಿಸ್ ಪಳ್ಳಿಕಲ್, ಸತ್ತಾರ್ ಮೇಲೆ ಬೈಲು ,ಆಸಿಫ್ ಹೊಟ್ಟಚೋಡಿ, ಅಬ್ದುಲ್ ಖಾದರ್ ಅತ್ತಿಮಾರಡ್ಕ ಸಹಕರಿಸಿದರು.