ವಿದ್ಯಾರ್ಥಿಯಲ್ಲಿ ನಾಯಕತ್ವ ಗುಣ ಮೈಗೂಡಲಿ – ಲತೀಫ್ ಸಖಾಫಿ ಗೂನಡ್ಕ

0

 

 

ಜಟ್ಟಿಪ್ಪಳ್ಳದಲ್ಲಿ ಆಕರ್ಷಣೀಯವಾಗಿ ನಡೆದ ಎಸ್ ಬಿ ಎಸ್ ಲೀಪ್ ಸ್ಟುಡೆಂಟ್ಸ್ ಕ್ಯಾಂಪ್

ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಸುಳ್ಯ ರೇಂಜ್ ಮಿಶನರಿ ವಿಭಾಗದ ವತಿಯಿಂದ ಎಸ್ ಬಿ ಎಸ್ ಸುಳ್ಯ ವಲಯ ಸಮಿತಿ ರಚನೆ ಹಾಗೂ ಲೀಪ್ ಸ್ಟುಡೆಂಟ್ಸ್ ಕ್ಯಾಂಪ್ ಕಾರ್ಯಕ್ರಮವು ಜಟ್ಟಿಪ್ಪಳ್ಳ ಬುಸ್ತಾನುಲ್ ಉಲೂಂ ಮದ್ರಸ ಸಭಾಂಗಣದಲ್ಲಿ ಆಕರ್ಷಣೀಯವಾಗಿ ನಡೆಯಿತು ರೇಂಜ್ ಅಧ್ಯಕ್ಷ ಮುಹಮ್ಮದ್ ಸಖಾಫಿ ಮೊಗರ್ಪಣೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಗಳನ್ನು ಜಟ್ಟಿಪ್ಪಳ್ಳ ಮದ್ರಸ ಸದರ್ ಮುಅಲ್ಲಿಂ ಅಶ್ರಫ್ ಮದನಿ ಉದ್ಘಾಟಿಸಿದರು.

ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ತರಗತಿ ಮಂಡಿಸಿ ವಿದ್ಯಾರ್ಥಿಯು ನಾಯಕತ್ವ ಗುಣ ಮೈಗೂಡಿಸಿಕೊಂಡು ಶಿಸ್ತು ಬದ್ಧವಾಗಿ ಬೆಳೆಯಲು ಕರೆ ನೀಡಿದರು.ಹೆಚ್ಚಿನ ಓದುವಿಕೆಯು ಜ್ಞಾನ ವೃದ್ಧಿಗೆ ರಾಜ ಮಾರ್ಗ ವಿದ್ಯಾರ್ಥಿ ಜ್ಞಾನ ಸಂಪಾದನೆಗೆ ಒತ್ತು ನೀಡಬೇಕೆಂದು ಸಲಹೆ ನೀಡಿದರು. ಮಿಶನರಿ ವಿಭಾಗ ಅಧ್ಯಕ್ಷ ಶಾಫಿ ಮಿಸ್ಬಾಹಿ ನೇತೃತ್ವದಲ್ಲಿ ಎಸ್ ಬಿ ಎಸ್ ಸುಳ್ಯ ವಲಯ ಸಮಿತಿ ರಚಿಸಲಾಯಿತು. ಕಾರ್ಯಕ್ರಮದಲ್ಲಿ ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುವ ರೇಂಜ್ ಉಪಾಧ್ಯಕ್ಷ ಅಬ್ದುಲ್ ಕರೀಂ ಸಖಾಫಿ ಕಟ್ಟತ್ತಾರು ರವರನ್ನು ಗೌರವಿಸಲಾಯಿತು.ಅಸ್ಸಯ್ಯಿದ್ ಹುಸೈನ್ ಪಾಷಾ ತಂಙಳ್ ಅನ್ಸಾರಿಯಾ ಪ್ರಾರ್ಥನೆಗೈದರು. ಜಟ್ಟಿಪ್ಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಶರೀಫ್ ಜಟ್ಟಿಪ್ಪಳ್ಳ ಶುಭ ಹಾರೈಸಿದರು.ಅಬ್ದುಲ್ ಖಾದರ್ ಮುಸ್ಲಿಯಾರ್ ಗಾಂಧಿನಗರ, ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ, ಅಬ್ದುರ್ರಹ್ಮಾನ್ ಸಖಾಫಿ ಸುಣ್ಣಮೂಲೆ, ಹಬೀಬ್ ಹಿಮಮಿ ಗೂನಡ್ಕ,ಅಬ್ದುರ್ರಶೀದ್ ಝೈನಿ ಶಾಂತಿನಗರ, ಹನೀಫ್ ಝೈನಿ ಪೆರಾಜೆ ಮುಂತಾದವರು ಉಪಸ್ಥಿತರಿದ್ದರು. ರೇಂಜ್ ವ್ಯಾಪ್ತಿಯ ಮದ್ರಸಗಳ ಎಸ್ ಬಿ ಎಸ್ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದರು.
ರೇಂಜ್ ಪ್ರಧಾನ ಕಾರ್ಯದರ್ಶಿ ನಿಝಾರ್ ಸಖಾಫಿ ಸ್ವಾಗತಿಸಿ, ಕೋಶಾಧಿಕಾರಿ ಶಾಹುಲ್ ಹಮೀದ್ ಸಖಾಫಿ ಜಾಲ್ಸೂರು ವಂದಿಸಿದರು.