ಸೆ. 9 ರಿಂದ ಜೇಸಿಐ ಸುಳ್ಯ ಪಯಸ್ವಿನಿಯಿಂದ ಜೇಸಿಐ ಸಪ್ತಾಹ

0

 

ಸೆ . 15ರಂದು ಎಸ್.ಎನ್. ಮನ್ಮಥರಿಗೆ ಕಮಲಪತ್ರ, ಕಮಿಲ ಸುರೇಶ್ ಭಟ್ ರಿಗೆ ಪಯಸ್ವಿನಿ ಶ್ರೀ, ದಿನೇಶ್ ಕುಕ್ಕುಜಡ್ಕರಿಗೆ ಕಲಾಶ್ರೀ ಪ್ರಶಸ್ತಿ ಪ್ರದಾನ

ಜೇಸಿಐ ಸುಳ್ಯ ಪಯಸ್ವಿನಿ ಸುಳ್ಯ ಮತ್ತು ಲೇಡಿ ಜೇಸಿ ಯುವ ಜೇಸಿ ವಿಭಾಗ ಹಾಗೂ ಪಯಸ್ವಿನಿ ಜೇಸಿಸ್ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಆಶ್ರಯದಲ್ಲಿ ನಮಸ್ತೆ ಜೇಸಿಐ ಸಪ್ತಾಹ ಸೆ.೯ ರಿಂದ ಆರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ರಂಜಿತ್ ಕುಕ್ಕೆಟ್ಟಿ ಹೇಳಿದರು.

ಇಂದು ಪತ್ರಿಕಾಗೋಷ್ಠಿ ನಡೆಸಿ ಸಪ್ತಾಹದ ವಿವರ ನೀಡಿದ ಅವರು ಸೆ.೯ ರಂದು ಜೇಸಿಐ ಸಪ್ತಾಹ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಸರಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ ನಡೆಯುವುದು.
ಸೆ.೧೦ ರಂದು ಶೇಣಿ ಅಂಗನವಾಡಿ ಕೇಂದ್ರ ಅಮರಮುಡ್ನೂರಿನಲ್ಲಿ ಪೀಠೋಪಕರಣಗಳ ವಿತರಣೆ ಹಾಗೂ ಮಕ್ಕಳಿಗೆ, ಪೋಷಕರಿಗೆ ಸ್ಪರ್ಧೆ ನಡೆಯುವುದು.
ಸೆ.೧೧ ರಂದು ಸುಳ್ಯ ಶ್ರೀರಾಂಪೇಟೆಯ ಕಾನತ್ತಿಲ ದೇವಮ್ಮ ಸಂಕೀರ್ಣ ದಲ್ಲಿ ವಿದ್ಯಾರ್ಥಿಗಳಿಗೆ ಚದುರಂಗ ಸ್ಪರ್ಧೆ (ಪದವಿ ಪೂರ್ವ ಮತ್ತು ಪದವಿ ವಿಭಾಗ ಪ್ರತ್ಯೇಕ) ನಡೆಯುವುದು.


ಅದೇ ದಿನ ಬಿಸಿಎಂ ಹಾಸ್ಟೆಲ್ ಕುರುಂಜಿಭಾಗ್ ನಲ್ಲಿ ನಾಯಕತ್ವ ತರಬೇತಿ ಮತ್ತು ಹದಿಹರೆಯದ ಮಕ್ಕಳ ಸಮಸ್ಯೆಗಳು ಮತ್ತು ಪರಿಹಾರ ಮಾಹಿತಿ ಕಾರ್ಯಾಗಾರ ನಡೆಯುವುದು.
ಸೆ.೧೨ ರಂದು ಮಂಡೆಕೋಲು ಸಹಕಾರಿ ಸಂಘದ ವಠಾರದಲ್ಲಿ ಸಾಬೂನು ಹಾಗೂ ಫಿನಾಯಿಲ್ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಹಿಳೆಯರಲ್ಲಿ ನಾಯಕತ್ವ ತರಬೇತಿ.
ಸೆ.೧೩ ರಂದು ಉಬರಡ್ಕ ಮಿತ್ತೂರು ಸ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನಡೆಯುವುದು.
ಸೆ.೧೪ ರಂದು ಕಾಯರ್ತೋಡಿ ಅಂಗನವಾಡಿ ಕೇಂದ್ರ ದಲ್ಲಿ ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ ಮತ್ತು ಪ್ರತಿಭಾ ಪುರಸ್ಕಾರ ನಡೆಯುವುದು.
ಅದೇ ದಿನ ಸಂಜೆ ಡಿ.ದೇವರಾಜು ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಎಲಿಮಲೆಯಲ್ಲಿ ಹೆಣ್ಣುಮಕ್ಕಳಿಗೆ ಆರೋಗ್ಯ ದ ಬಗ್ಗೆ ಮಾಹಿತಿ ಮತ್ತು ತಪಾಸಣೆ ನಡೆಯುವುದು.
ಸೆ.೧೫ರಂದು ಸುಳ್ಯ ಶ್ರೀರಾಂ ಪೇಟೆ ಕಾನತ್ತಿಲ ಕಾಂಪ್ಲೆಕ್ಸ್‌ನಲ್ಲಿ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ನಡೆಯುವುದು. ಜೇಸಿಐ ಸುಳ್ಯ ಪಯಸ್ವಿನಿ ಪೂರ್ವಾಧ್ಯಕ್ಷ ಎಸ್.ಎನ್. ಮನ್ಮಥರಿಗೆ ಕಮಲಪತ್ರ ಪುರಸ್ಕಾರ, ಉದ್ಯಮಿ ಸುರೇಶ್ ಭಟ್ ಕಮಿಲರಿಗೆ ಪಯಸ್ವಿನಿಶ್ರೀ ಹಾಗೂ ಖ್ಯಾತ ವ್ಯಂಗ್ಯ ಚಿತ್ರಕಾರ ದಿನೇಶ್ ಕುಕ್ಕುಜಡ್ಕರಿಗೆ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಾಗೂ ಪ್ರತಿಭಾ ಪುರಸ್ಕಾರವು ನಡೆಯುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಘಟಕದ ಪೂರ್ವಾಧ್ಯಕ್ಷ ದೇವರಾಜ್ ಕುದ್ಪಾಜೆ, ಅಶೋಕ್ ಚೂಂತಾರು, ಸಪ್ತಾಹ ನಿರ್ದೇಶಕಿ ಶೋಭಾ ಅಶೋಕ್ ಚೂಂತಾರು, ಕಾರ್ಯದರ್ಶಿ ನವೀನ್ ಕುಮಾರ್, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಅನಿಲ್ ಬಳ್ಳಡ್ಕ ಇದ್ದರು.