ಶಿಕ್ಷಕರ ದಿನಾಚರಣೆ ಪ್ರಯುಕ್ತ ಐವರು ಶಿಕ್ಷಕರಿಗೆ ಸುಳ್ಯ ರೋಟರಿ ನೇಶನ್ ಬಿಲ್ಡರ್ ಅವಾರ್ಡ್

0

 

 

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅತ್ಯುತ್ತಮ ಸೇವೆ ಸಲ್ಲಿಸುವ ಶಿಕ್ಷಕರಿಗೆ ರೋಟರಿ ಕ್ಲಬ್ ಸುಳ್ಯ ವತಿಯಿಂದ ಕೊಡಮಾಡುವ ನೇಷನ್ ಬಿಲ್ಡರ್ ಟೀಚರ್ ಪ್ರಶಸ್ತಿಯನ್ನು ಈ ಬಾರೀ ಐವರು ಶಿಕ್ಷಕರಿಗೆ ನೀಡಲು ನಿರ್ಧರಿಸಲಾಗಿದೆ.

ಅಜ್ಜಾವರ ಗ್ರಾಮದ ಮೇನಾಲ ಕಿ.ಪ್ರಾ.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಕನಕ, ಅಜ್ಜಾವರ ಸ.ಪ್ರೌ. ಶಾಲೆಯ ದೈ.ಶಿ.ಶಿಕ್ಷಕಿ ರೇವತಿ, ಸುಳ್ಯ ಜಯನಗರ ಶಾಲಾ ದೈ.ಶಿ.ಶಿಕ್ಷಕ ತೀರ್ಥರಾಮ ಅಡ್ಕಬಳೆ, ಜಟ್ಟಿಪಳ್ಳ ಶಾಲಾ ಸಹ ಶಿಕ್ಷಕಿ ಕೇಸರಿ ಹಾಗೂ ಸೋಣಂಗೇರಿ ಶಾಲೆಯ ಸಹ ಶಿಕ್ಷಕಿ ಸವಿತಾ ಎನ್ ಪಿ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.

ಸೆ.7 ರಂದು ಸಂಜೆ ಸುಳ್ಯದ ರೋಟರಿ ಶಾಲಾ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ನೀಡಿ ಈ ಶಿಕ್ಷಕರನ್ನು ಗೌರವಿಸಲಾಗುವುದು ಎಂದು ರೋಟರಿ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ತಿಳಿಸಿರುತ್ತಾರೆ.