ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ವತಿಯಿಂದ ಓಣಂ ಆಚರಣೆ ಮತ್ತು ಕುಟುಂಬ ಸಮ್ಮಿಲನ

0

 

ಸವಣೂರು ಸೀತಾರಾಮ ರೈ, ಗಂಗಾಧರ ಕಲ್ಲಪ್ಪಳ್ಳಿಯವರಿಗೆ ಸನ್ಮಾನ

ದುರ್ಗಾಕುಮಾರ್ ನಾಯರ್‌ಕೆರೆ, ಸಿ.ಎಚ್. ಪ್ರಭಾಕರ ನಾಯರ್ ಗೆ ಗೌರವಾರ್ಪಣೆ

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಸುಳ್ಯ ಕರಯೋಗಂ ವತಿಯಿಂದ ಓಣಂ ಆಚರಣೆ ಮತ್ತು ಕುಟುಂಬ ಸಮ್ಮಿಲನವು ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಸಭಾಭವನದಲ್ಲಿ ಇಂದು ನಡೆಯಿತು.

ಬೆಂಗಳೂರು ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಮನೋಹರ್ ಕುರೂಪ್ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ವಿಜಯಕುಮಾರ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ಮುಖ್ಯ ಅತಿಥಿಗಳಾಗಿದ್ದರು.

ಸಮಾರಂಭದಲ್ಲಿ ಕೆ.ಎನ್.ಎಸ್.ಎಸ್. ಸುಳ್ಯ ಕರಯೋಗಂ ವತಿಯಿಂದ ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಮತ್ತು ಮಲಯಾಳ ಮನೋರಮಾ ಪತ್ರಿಕೆಯ ಗಂಗಾಧರ ಕಲ್ಲಪ್ಪಳ್ಳಿಯವರನ್ನು ಸನ್ಮಾನಿಸಲಾಯಿತು.

ಸುಳ್ಯ ಕರಯೋಗಂ‌ ಸದಸ್ಯರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಹಾಗೂ ಸಾಮಾಜಿಕ ಕಾರ್ಯರ್ತ ಸಿ.ಎಚ್. ಪ್ರಭಾಕರನ್ ನಾಯರ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು.

ಸುಳ್ಯ ಕರಯೋಗಂ ಅಧ್ಯಕ್ಷ ಭಾಸ್ಕರನ್ ನಾಯರ್ ಮಧುವನ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಿಸಲಾಯಿತು.‌

 

 

ಶ್ರೀಮತಿ ಅರುಣಾ ಪ್ರಮೋದ್ ಸ್ವಾಗತಿಸಿದರು. ಸುಳ್ಯ ಕರಯೋಗಂ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣನ್ ನಾಯರ್ ಎಸ್.ಬಿ. ಪ್ರಸ್ತಾವನೆಗೈದರು. ಕೋಶಾಧಿಕಾರಿ ಪ್ರಭಾಕರನ್ ನಾಯರ್ ಸ್ವಾಗತ್ ವಂದಿಸಿದರು. ದುರ್ಗಾಕುಮಾರ್ ನಾಯರ್‌ಕೆರೆ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥನ್ ನಾಯರ್, ಶ್ರೀಮತಿ ಶಶಿಕಲಾ ಪ್ರಭಾಕರನ್ ಸನ್ಮಾನಿತರನ್ನು ಪರಿಚಯಿಸಿದರು. ಶ್ರೀಮತಿ ಶ್ರೀಕಲಾ ಬಾಲಕೃಷ್ಣನ್ ಸ್ಪರ್ಧಾ ವಿಜೇತರ ಪಟ್ಟಿ ಓದಿದರು.

ಓಣಂ ಆಚರಣೆಯ ಅಂಗವಾಗಿ ಪೂಕಳಂ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನ, ಓಣಂ ಸದ್ಯ ನಡೆಯಿತು.